ಕರ್ನಾಟಕ

karnataka

ETV Bharat / city

370 ರದ್ಧತಿ ದೇಶಾದ್ಯಂತ ಅಭಿಪ್ರಾಯ ಸಂಗ್ರಹಿಸುತ್ತಿರುವ ಕೇಂದ್ರ: ಸುಧಾಮೂರ್ತಿ ಭೇಟಿಯಾದ ಹರ್ಷವರ್ಧನ್​

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ನಿವಾಸಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸುಧಾಮೂರ್ತಿ ಭೇಟಿಯಾಗಿ ಸಮಾಲೋಚಿಸಿದ ಹರ್ಷವರ್ಧನ್

By

Published : Sep 16, 2019, 8:05 AM IST

ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಮನೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಸುಧಾಮೂರ್ತಿ ಭೇಟಿಯಾಗಿ ಸಮಾಲೋಚಿಸಿದ ಹರ್ಷವರ್ಧನ್

ಜಯನಗರದಲ್ಲಿರುವ ನಿವಾಸಕ್ಕೆ ಕೇಂದ್ರ ಮಂತ್ರಿಗಳಾದ ಹರ್ಷವರ್ಧನ್ ಮತ್ತು ಸಂಸದ ಪಿ.ಸಿ ಮೋಹನ್ ಮತ್ತು ಎಂಎಲ್​ಸಿ ರವಿಕುಮಾರ್ ಸಹ ಬಂದಿದ್ದರು. ಈ ವೇಳೆ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ನೆರೆ ಸಂದರ್ಭದಲ್ಲಿ ಸುಧಾಮೂರ್ತಿ ಅವರ ಸೇವೆಯನ್ನು ಹರ್ಷವರ್ಧನ್ ಶ್ಲಾಘಿಸಿ, 370 ನೇ ವಿಧಿ ರದ್ದು ಕುರಿತು ಕೆಲ ವಿಚಾರಗಳನ್ನು ಹಂಚಿಕೊಂಡರು.

ಹರ್ಷವರ್ಧನ್​ ಅವರು 'ದಿ ಟೇಲ್ ಆಫ್ ಟೂ ಡ್ರಾಪ್ಸ್' ಎಂಬ ಪುಸ್ತಕವನ್ನು ಸುಧಾಮೂರ್ತಿಯವರಿಗೆ ಉಡುಗೊರೆ ನೀಡಿದರು. ಇನ್ಫೋಸಿಸ್ ಪ್ರತಿಷ್ಠಾನದ ಆಶ್ರಯದಲ್ಲಿರೂ ದೇವದಾಸಿಯರು ಕೈಯಲ್ಲಿ ಹೊಲಿದ ಕೌದಿ, ಸುಧಾಮೂರ್ತಿಯವರು ತಾವೇ ಬರೆದ 'ದಿ ತ್ರೀ ಥೌಸಂಡ್ ಸ್ಟೀಚಸ್' ಎಂಬ ಪುಸ್ತಕವನ್ನು ಹರ್ಷವರ್ಧನ್​ರವರಿಗೆ ನೀಡಿದರು.

ಇನ್ನು ಕೇಂದ್ರ ಸರ್ಕಾರದಲ್ಲಿನ ಮಂತ್ರಿಮಂಡಲದ ಎಲ್ಲ ಮಂತ್ರಿಗಳು 370 ನೇ ವಿಧಿ‌ ತಿದ್ದುಪಡಿಯ ಬಗ್ಗೆ ಅರಿವು ಮೂಡಿಸುವ ಜನ ಸಂಪರ್ಕ ಯಾತ್ರೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸುಧಾಮೂರ್ತಿಯವರು ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸಬೇಕು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

ABOUT THE AUTHOR

...view details