ಕರ್ನಾಟಕ

karnataka

ETV Bharat / city

ರಾಜ್ಯದ ಪಿಯು ಕಾಲೇಜುಗಳಲ್ಲಿ ರೆಡ್​ಕ್ರಾಸ್ ಘಟಕ ಪ್ರಾರಂಭಕ್ಕೆ ಸರ್ಕಾರ ಅನುಮತಿ - Government grant to start to Red Cross unit at PU colleges in state

ಎಲ್ಲಾ ಪದವಿ ಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 25 ರೂಪಾಯಿ ಶುಲ್ಕ ಸಂಗ್ರಹಿಸಿ, ಅದರಲ್ಲಿ 10 ರೂ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ, 15 ರೂಪಾಯಿ ಕಿರಿಯ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳಿಗಾಗಿ ಪದವಿ ಪೂರ್ವ ಕಾಲೇಜುಗಳಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಆದೇಶಿಸಿದೆ..

red-cross
ರೆಡ್​ಕ್ರಾಸ್ ಘಟಕ

By

Published : Jan 19, 2022, 7:42 PM IST

ಬೆಂಗಳೂರು :ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳಲ್ಲಿ ಕಿರಿಯ ರೆಡ್​​ಕ್ರಾಸ್ ಘಟಕ ಸ್ಥಾಪನೆಗೆ ಅನುಮತಿ ಕೋರಿದ್ದ ರೆಡ್​ಕ್ರಾಸ್​ ಸಂಸ್ಥೆಗೆ ಪಿಯು ಬೋರ್ಡ್​ ಗ್ರೀನ್​ ಸಿಗ್ನಲ್​ ನೀಡಿದೆ. ಅಲ್ಲದೇ, ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ರೆಡ್​ಕ್ರಾಸ್​ ಸಂಸ್ಥೆಯ ಘಟಕ ಸ್ಥಾಪನೆಗೆ ಆದೇಶ ಹೊರಡಿಸಿದೆ.

ಕಿರಿಯ ರೆಡ್​ಕ್ರಾಸ್ ವಿಭಾಗಕ್ಕೆ ವಾರ್ಷಿಕವಾಗಿ 100 ರೂ.ಗಳನ್ನು ಸದಸ್ಯತ್ವ ಶುಲ್ಕವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಪಾವತಿಸಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದೆ.

ಎಲ್ಲಾ ಪದವಿ ಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 25 ರೂಪಾಯಿ ಶುಲ್ಕ ಸಂಗ್ರಹಿಸಿ, ಅದರಲ್ಲಿ 10 ರೂ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ, 15 ರೂಪಾಯಿ ಕಿರಿಯ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳಿಗಾಗಿ ಪದವಿ ಪೂರ್ವ ಕಾಲೇಜುಗಳಲ್ಲಿಯೇ ಉಳಿಸಿಕೊಳ್ಳಲು ಸರ್ಕಾರ ಆದೇಶಿಸಿದೆ.

ಸಂಗ್ರಹಿಸಲಾದ ಶುಲ್ಕದ ಲೆಕ್ಕಪತ್ರಗಳನ್ನು ರಸೀದಿ ಪುಸ್ತಕಗಳೊಂದಿಗೆ ಸೂಕ್ತ ರೀತಿ ನಿರ್ವಹಿಸಲು ಸೂಚಿಸಿದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ನಡೆಸಬೇಕೆಂದು ಸಲಹೆ ನೀಡಿದೆ.

ಇದನ್ನೂ ಓದಿ:ಮಂಜುವಿರಟ್ಟು ಸ್ಪರ್ಧೆ ವೀಕ್ಷಿಸಲು ಬಂದ ವ್ಯಕ್ತಿಗೆ ಹೋರಿ ತಿವಿದು ಸಾವು

For All Latest Updates

ABOUT THE AUTHOR

...view details