ಬೆಂಗಳೂರು :ರಾಜ್ಯದಲ್ಲಿಂದು 1,79,227 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1220 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,53,064ಕ್ಕೆ ಏರಿಕೆ ಕಂಡಿದೆ. ಸದ್ಯ ಪಾಸಿಟಿವಿಟಿ ದರ ಶೇ.0.68 ರಷ್ಟಿದೆ.
ಇಂದು 1175 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 28,97,254 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ 18,404ರಷ್ಟಿವೆ. 19 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,380ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ.1.55ರಷ್ಟಿದೆ.
ವಿಮಾನ ನಿಲ್ದಾಣದಿಂದ 740 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳಪಟ್ಟಿದ್ದಾರೆ. 257 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು 319 ಮಂದಿಗೆ ಸೋಂಕು ದೃಢಪಟ್ಟಿದ್ದು, 202 ಮಂದಿ ಗುಣಮುಖರಾಗಿದ್ದಾರೆ. 8 ಸೋಂಕಿತರು ಮೃತರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳು 7728 ಇವೆ.
ಬಿಬಿಎಂಪಿ ಕೈಸೇರಿದ ಸೇರೋ ಸರ್ವೇ : ನಿಟ್ಟುಸಿರು ಬಿಟ್ಟ ಜನ
ಬಹುನಿರೀಕ್ಷಿತ ಸೆರೋ ಸರ್ವೇ( SERO) ಬಿಬಿಎಂಪಿ ಕೈಸೇರಿದ್ದು, ಪಾಲಿಕೆ ನಿಟ್ಟುಸಿರು ಬಿಟ್ಟಿದೆ. ನಗರದ ಶೇ.75ರಷ್ಟು ಜನರಲ್ಲಿ ಕೊರೊನಾ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಸೇರೋ ಸರ್ವೇ ಅಧ್ಯಯನದಲ್ಲಿ ತಿಳಿದು ಬಂದಿದ್ದು, ಪಾಲಿಕೆ ನಿಟ್ಟುಸಿರು ಬಿಡುವಂತಾಗಿದೆ. ಲಸಿಕೆ ಪಡೆದ 1000 ಮಂದಿ ಹಾಗೂ ಪಡೆಯದ 1000 ಮಂದಿ ಮೇಲೆ ಸರ್ವೇ ನಡೆಸಲಾಗಿತ್ತು. ಇದರಲ್ಲಿ ಲಸಿಕೆ ಪಡೆದವರಲ್ಲೂ ಪಡೆಯದವರಲ್ಲೂ ಶೇ.75ರಷ್ಟು ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ.
- 18 ವರ್ಷದ ಕೆಳಗಿನ ಶೇ.30
- 18 ರಿಂದ 44 ವರ್ಷದ ಶೇ.50
- 45 ವರ್ಷ ಮೇಲ್ಪಟ್ಟ ಶೇ.20 ಮಂದಿಯ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಲಸಿಕೆ ಪಡೆಯದಿದ್ದರೂ ಆಹಾರ ಮತ್ತು ವ್ಯಾಯಾಮದ ಮೊರೆ ಹೋಗಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ.
ಕೆಲವರು ಲಸಿಕೆ ಪಡೆಯದಿದ್ದರೂ ಆಹಾರ ಮತ್ತು ವ್ಯಾಯಾಮದ ಮೊರೆ ಹೋದವರಿಗೆ ರೋಗ ನಿರೋಧಕ ಶಕ್ತಿ ಉತ್ಪತಿಯಾಗಿದೆ ಎಂದು ಹೇಳಲಾಗಿದೆ. ಕಿದ್ವಾಯಿ ಆಸ್ಪತ್ರೆಯ ವೈದ್ಯರ ತಂಡದಿಂದ ನಡೆದ ಸೇರೋ ಸರ್ವೇಯಲ್ಲಿ ಈ ಮಾಹಿತಿ ಸಿಕ್ಕಿದೆ.
ರೂಪಾಂತರಿ ವೈರಸ್ ಅಪಡೇಟ್ಸ್
1) ಡೆಲ್ಟಾ ( Delta/B.617.2) - 1092
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1