ಕರ್ನಾಟಕ

karnataka

ETV Bharat / city

ಇ-ಆಡಳಿತದಲ್ಲಿ ತಂತ್ರಾಂಶ ಮತ್ತು ದತ್ತಾಂಶ ಸುರಕ್ಷತೆಗೆ ಒತ್ತು ನೀಡಿ : ಸಿಎಂ ಸೂಚನೆ - bangalore latest news

ಮಾನವ ಸಂಪನ್ಮೂಲದ ದೃಷ್ಟಿಯಿಂದ ಇಲಾಖೆಯು ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ. ಇಲಾಖೆಯ ತಂತ್ರಾಂಶ ಹಾಗೂ ತಂತ್ರಜ್ಞಾನದ ದುರುಪಯೋಗಕ್ಕೆ ಹೊಣೆಗಾರಿಕೆ ನಿಗದಿಪಡಿಸುವ ಅಗತ್ಯವಿದೆ. ಇ-ಆಡಳಿತದಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸರಿಪಡಿಸಲು ಸಿಬ್ಬಂದಿ ನಿಯೋಜಿಸುವಂತೆ ಸಿಎಂ ಸಲಹೆ ನೀಡಿದರು..

cm meeting
ಸಿಎಂ ನೇತೃತ್ವದ ಸಭೆ

By

Published : Oct 1, 2021, 7:59 PM IST

ಬೆಂಗಳೂರು: ಇ-ಆಡಳಿತದಲ್ಲಿ ತಂತ್ರಾಂಶಗಳ ಸುರಕ್ಷತೆ ಹಾಗೂ ಅವುಗಳನ್ನು ಬಳಸುವ ನಾಗರಿಕರ ದತ್ತಾಂಶದ ಸುರಕ್ಷತೆಗೆ ಒತ್ತು ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ- ಆಡಳಿತ) ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಅರ್ಜಿ ಸಲ್ಲಿಸದೆಯೇ ನೇರವಾಗಿ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಪೂರಕವಾಗಿರುವ ಕುಟುಂಬ, ಕೃಷಿ ಇಲಾಖೆಯ ಬೆಳೆವಿಮೆ ನಿರ್ವಹಣೆಯ ಸಂರಕ್ಷಣೆ ಮತ್ತು ಇತರೆ ಯೋಜನೆಗಳ ಕುರಿತು ಸಭೆಯಲ್ಲಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಎಂ ನೇತೃತ್ವದ ಸಭೆ

ಮಾನವ ಸಂಪನ್ಮೂಲದ ದೃಷ್ಟಿಯಿಂದ ಇಲಾಖೆಯು ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ. ಇಲಾಖೆಯ ತಂತ್ರಾಂಶ ಹಾಗೂ ತಂತ್ರಜ್ಞಾನದ ದುರುಪಯೋಗಕ್ಕೆ ಹೊಣೆಗಾರಿಕೆ ನಿಗದಿಪಡಿಸುವ ಅಗತ್ಯವಿದೆ. ಇ-ಆಡಳಿತದಲ್ಲಿ ತಾಂತ್ರಿಕ ಸಮಸ್ಯೆಗಳು ತಲೆದೋರಿದಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸರಿಪಡಿಸಲು ಸಿಬ್ಬಂದಿ ನಿಯೋಜಿಸುವಂತೆ ಸಿಎಂ ಸಲಹೆ ನೀಡಿದರು.

ಇದನ್ನೂ ಓದಿ:ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ.. ಅರಮನೆಯೊಳಗೆ ಭರದಿಂದ ಸಾಗಿದ ಸಿದ್ಧತೆಗಳು..

ಪ್ರತಿ ಗ್ರಾಮ ಪಂಚಾಯತ್‌ಗೆ ಒಂದರಂತೆ ನಾಗರಿಕ ಸೇವೆಗಳನ್ನು ಪೂರೈಸುವ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಸಲಹೆ ನೀಡಿದರು. ಈ ಕೇಂದ್ರಗಳಲ್ಲಿ ಜನರಿಗೆ ಅತಿ ಅಗತ್ಯವಿರುವ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವಂತೆ ಸೂಚಿಸಿದರು. ಈ ಸೌಲಭ್ಯವನ್ನು ಜನವರಿ 26ರಂದು ಲೋಕಾರ್ಪಣೆಗೊಳಿಸಲಾಗುವುದು. ಜನಸಂಖ್ಯೆ ಆಧರಿಸಿ, ಸೇವಾಕೇಂದ್ರಗಳ ಸಂಖ್ಯೆ ನಿಗದಿಪಡಿಸುವಂತೆ ಸೂಚಿಸಿದರು.

ABOUT THE AUTHOR

...view details