ಕರ್ನಾಟಕ

karnataka

ETV Bharat / city

ಆರ್​​​ ಆರ್ ನಗರ ಅನರ್ಹ ಶಾಸಕರಿಂದ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ - ಬಡವರಿಗೆ ಊಟದ ವ್ಯವಸ್ಥೆ

ನಗರದ ರಾಜರಾಜೇಶ್ವರಿ ವಿಧಾಸನಭಾ ಕ್ಷೇತ್ರದ ಕೂಲಿ ಕಾರ್ಮಿಕರು, ಬಡವರಿಗೆ ಅನರ್ಹ ಶಾಸಕ ಮುನಿರತ್ನ ಅವರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

food supply for poor people in bangalore
ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ...

By

Published : Mar 30, 2020, 8:25 PM IST

ಬೆಂಗಳೂರು: ಕೂಲಿ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಹಸಿವು ನೀಗಿಸುವ ಕೆಲಸಕ್ಕೆ ರಾಜರಾಜೇಶ್ವರಿ ನಗರ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಮುಂದಾಗಿದ್ದಾರೆ.

ಆರ್​​​ಆರ್​​​ ನಗರ ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಮೂರೊತ್ತು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಮತ್ತಿಕೆರೆ ಬಳಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಅಡುಗೆ ಮಾಡಿಸಿ ಕ್ಷೇತ್ರದ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ

ನಿತ್ಯ 5,000 ಕೆ.ಜಿ ಅಕ್ಕಿ ಬಳಸಲಾಗುತ್ತಿದ್ದು, 50 ರಿಂದ 60 ಸಾವಿರ ಜನರಿಗೆ ಊಟ ವಿತರಿಸಲಾಗುತ್ತದೆ. ಅದಕ್ಕಾಗಿ 60 ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಇಂದಿನಿಂದ ನಿರಂತರವಾಗಿ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ABOUT THE AUTHOR

...view details