ಬೆಂಗಳೂರು:ಇತ್ತಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗುತ್ತಿದೆ. ಮತ್ತೊಂದೆಡೆ ಪರಿಸರ ಮಾಲಿನ್ಯವೂ ಅಪಾಯಕಾರಿ ಮಟ್ಟ ತಲುಪುತ್ತಿರುವ ಕಾಲಘಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಎಲ್ಲರೂ ಚಿತ್ತ ಹರಿಸುತ್ತಿದ್ದಾರೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಜೊತೆ ಈಟಿವಿ ಭಾರತ ಪ್ರತಿನಿಧಿ ಮಾಹಿತಿ ಸಂಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಮಹಾನಗರದ ರಸ್ತೆಗಳಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳನ್ನು ಓಡಿಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ.ಯನ್ನು 90 ಎಲೆಕ್ಟ್ರಿಕ್ ಬಸ್ಗಳಿಗೆ ಉಪಯೋಗಿಸುತ್ತಿದೆ. 'ಒಟ್ಟು ಒಪ್ಪಂದ ವೆಚ್ಚ' (ಜಿಸಿಸಿ) ಗುತ್ತಿಗೆಯಡಿ ಜೆಬಿಎಂ ಸಂಸ್ಥೆ ಈ ಬಸ್ಗಳನ್ನು ಸಿದ್ಧಪಡಿಸಿದ್ದು, NTPC ವ್ಯಾಪರ್ ವಿದ್ಯುತ್ ನಿಗಮ ಈ ಬಸ್ಗಳ ನಿರ್ವಹಣೆ ಮಾಡಲಿದೆ.
ಈ ಬಸ್ಗಳು ಬಿಎಂಟಿಸಿ ಒಡೆತನಕ್ಕೆ ಬರುವುದಿಲ್ಲ. ಬದಲಾಗಿ 10 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಎನ್ಟಿಪಿಸಿ ವ್ಯಾಪರ್ ವಿದ್ಯುತ್ ನಿಗಮ ಇದರ ಜವಾಬ್ದಾರಿ ಹೊತ್ತಿದ್ದು, ದಿನಕ್ಕೆ 180 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಫೀಡರ್ ಆಗಿ ಸೇವೆ ಸಲ್ಲಿಸಲಿದೆ.
ಪ್ರತಿ ಕಿ.ಮೀ ಗೆ 51.67 ರೂ.ಯನ್ನು ಬಿಎಂಟಿಸಿ ಸಂಸ್ಥೆಗೆ ಕೊಡಲಿದೆ. ಖಾಸಗಿ ಸಂಸ್ಥೆಯೇ ತನ್ನ ಬಸ್ಗೆ ಚಾಲಕರನ್ನು ನಿಯೋಜಿಸಲಿದೆ. ಜತೆಗೆ ಚಾರ್ಜಿಂಗ್ ವ್ಯವಸ್ಥೆ ನಿರ್ವಹಣೆಯನ್ನೂ ನೋಡಿಕೊಳ್ಳಲಿದೆ. ಕೆಲಸದ ಮಧ್ಯೆ ಒಂದು ಬಾರಿ ಚಾರ್ಜ್ ಮಾಡಲು 45 ನಿಮಿಷಗಳು ಬೇಕಾಗಿದ್ದು, 120 ಕಿ.ಮೀ ಓಡಿಸಬಹುದಾಗಿದೆ.
ಕೆಂಗೇರಿ, ಕೆ.ಆರ್.ಪುರಂ, ಯಶವಂತಪುರ ಸುತ್ತಮುತ್ತ ಮೆಟ್ರೋ ಫೀಡರ್ ಆಗಿ ಎಲೆಕ್ಟ್ರಿಕ್ ಬಸ್ಗಳು ಕಾರ್ಯ ನಿರ್ವಹಿಸಲಿದೆ. ಈ ಬಸ್ನಲ್ಲಿ 33 ಜನ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಪ್ರತೀ ಸೀಟ್ನಲ್ಲಿ ಎಮರ್ಜೆನ್ಸಿ ಬಟನ್ ವ್ಯವಸ್ಥೆ ಮಾಡಲಾಗಿದೆ.
ಒಂದೊಂದು ಬಸ್ಗೂ ಬಿಎಂಟಿಸಿ 45 ಲಕ್ಷ ರೂ.ಯನ್ನು ಸಂಸ್ಥೆಗೆ ನೀಡಿದೆ. ಉಳಿದಂತೆ ಕಂಡಕ್ಟರ್ನ್ನು ಬಿಎಂಟಿಸಿ ವತಿಯಿಂದಲೇ ನೇಮಿಸಲಾಗುತ್ತದೆ. ಟಿಕೆಟ್ ಹಣವನ್ನೂ ಬಿಎಂಟಿಸಿಯೇ ಪಡೆಯಲಿದೆ. ಪ್ರತಿಯಾಗಿ ಕಿ.ಮೀ ಗೆ 51 ರೂ.ಯಂತೆ ಬಿಎಂಟಿಸಿ ಖಾಸಗಿ ಸಂಸ್ಥೆಗೆ ಕೊಡಲಿದೆ.
ಇದನ್ನೂ ಓದಿ:ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ ನಾಳೆ ಅನಾವರಣ; ರಸ್ತೆಗಿಳಿಯೋದು ಯಾವಾಗ?