ಕರ್ನಾಟಕ

karnataka

ETV Bharat / city

ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಅಭಿಯಂತರರ ಕಚೇರಿಗೆ ಬೆಂಕಿ : ದಾಖಲೆಗಳು ನಾಶ! - fire on BBMP office

ಬಿಬಿಎಂಪಿ ಯಲಹಂಕ ವಲಯದ ಚೀಫ್ ಇಂಜಿನಿಯರ್ ಕ್ಯಾಬಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು..

Fire on BBMP Yalahanka Chief Engineer office
ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಅಭಿಯಂತರರ ಕಚೇರಿಗೆ ಬೆಂಕಿ

By

Published : Apr 16, 2022, 5:56 PM IST

Updated : Apr 16, 2022, 6:58 PM IST

ಬೆಂಗಳೂರು: ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಬಿಬಿಎಂಪಿ ಯಲಹಂಕ ವಲಯದ ಚೀಫ್ ಇಂಜಿನಿಯರ್ ಕ್ಯಾಬಿನ್​ನಲ್ಲಿ(ಬ್ಯಾಟರಾಯನಪುರ) ಎ.ಸಿ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು. ಎರಡನೇ ಫ್ಲೋರ್​ನ ಮುಖ್ಯ ಇಂಜಿನಿಯರ್ ಕಚೇರಿಗೆ ಹೊಂದಿಕೊಂಡಂತಿರುವ ರೆಕಾರ್ಡ್ಸ್ ರೂಮ್​ನಲ್ಲೂ ಸಹ ಬೆಂಕಿ ಕಾಣಿಸಿಕೊಂಡು, ದಾಖಲೆಗಳು ನಾಶವಾಗಿವೆ.

ಬೆಂಕಿ ಬಿದ್ದ ಕೂಡಲೇ ಯಲಹಂಕ ಮತ್ತು ಹೆಬ್ಬಾಳ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳ ಮೇಲೆ ತಿಂಗಳ ಹಿಂದೆ ಸರ್ಕಾರಿ ಸಂಸ್ಥೆಯಿಂದ ದಾಳಿಯಾಗಿತ್ತು.

ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಅಭಿಯಂತರರ ಕಚೇರಿಗೆ ಬೆಂಕಿ

ಅದೇ ಕಚೇರಿಯ ರೆಕಾರ್ಡ್ಸ್ ರೂಮ್​ಗೆ ಇಂದು ಬೆಂಕಿ ಬಿದ್ದಿದೆ. ಇದು ಆಕಸ್ಮಿಕವಾಗಿ ಸಂಭವಿಸಿದ್ದೋ ಅಥವಾ ಉದ್ದೇಶಪೂರ್ವಕ ಬೆಂಕಿ ದಾಳಿಯೋ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಹೈಕೋರ್ಟ್ ಚಾಟಿ ಬಳಿಕ ಘನತ್ಯಾಜ್ಯ ತೆರವಿಗೆ ಮುಂದಾದ ಮಂಗಳೂರು ಮಹಾನಗರ ಪಾಲಿಕೆ

ಮಹತ್ವದ ದಾಖಲೆಗಳು ಅಗ್ನಿಗಾಹುತಿ? ಅಗ್ನಿ ಅವಘಡದಲ್ಲಿ ಕೆಲ ಮಹತ್ವದ ದಾಖಲೆ ಬೆಂಕಿಗಾಹುತಿಯಾಗಿವೆ. ಆದರೆ, ಅಧಿಕಾರಿಗಳು ಏನೂ ಅಗಿಲ್ಲ, ಆಕಸ್ಮಿಕ‌ ಬೆಂಕಿ ಎಂದು ಹೇಳಿದ್ದಾರೆ. ಅಮೃತಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಕೈಗೊಂಡಿದ್ದಾರೆ.

Last Updated : Apr 16, 2022, 6:58 PM IST

ABOUT THE AUTHOR

...view details