ಕರ್ನಾಟಕ

karnataka

ETV Bharat / city

ಜಮೀನು ವಿವಾದ: ದೇವನಹಳ್ಳಿಯ ಗ್ರಾಮದಲ್ಲಿ ಗುಂಪು ಘರ್ಷಣೆ - ಜಮೀನು ವಿಚಾರಕ್ಕೆ ಜಗಳ

ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಬೂದಿಗೆರೆ ರಸ್ತೆಯಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

fight-between-two-groups
ಎರಡು ಗುಂಪುಗಳ ನಡುವೆ ಮಾರಾಮಾರಿ

By

Published : Nov 26, 2021, 6:02 PM IST

Updated : Nov 26, 2021, 8:47 PM IST

ದೊಡ್ಡಬಳ್ಳಾಪುರ: ಜಮಿನು ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ದೇವನಹಳ್ಳಿ ತಾಲೂಕಿನ ಬೈಚಾಪುರ ಗ್ರಾಮದ ಬೂದಿಗೆರೆ ರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ

ಜಮೀನು ವಿವಾದ ಸಂಬಂಧಿಸಿದಂತೆ ಇಂದು ಬೆಳಿಗ್ಗೆಯಿಂದ ಈ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಮಧ್ಯಾಹ್ನದ ನಂತರ ದೊಣ್ಣೆ, ಕುಡುಗೋಲು ಹಿಡಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ. ಇದೇ ವೇಳೆ, ಜಗಳ ಬಿಡಿಸಲು ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ.

ದೇವನಹಳ್ಳಿ ಟೌನ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Last Updated : Nov 26, 2021, 8:47 PM IST

ABOUT THE AUTHOR

...view details