ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಇತ್ತೀಚೆಗೆ ಹಲವರಿಗೆ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಬಡ್ಡಿ ಸಮೇತ ಮರುಪಾವತಿಸುವಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ವಿಚಿತ್ರ ಎಂದರೆ ಹೀಗೆ ನೋಟಿಸ್ ಪಡೆದವರಲ್ಲಿ ಹಲವರಿಗೆ ಬ್ಯಾಂಕ್ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಈ ಬ್ಯಾಂಕ್‌ನಲ್ಲಿ ಠೇವಣಿಯೂ ಇಲ್ಲ. ಬ್ಯಾಂಕ್‌ನಲ್ಲಿ ಯಾವುದೇ ವ್ಯವಹಾರವೂ ಮಾಡಿರುವುದಿಲ್ಲ. ಆಡಳಿತ ಮಂಡಳಿ ಗ್ರಾಹಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್ ಆರೋಪಿಸಿದ್ದಾರೆ.
ಸಾಲ ಪಡೆಯಲಿಲ್ಲ - ಸಾಲ ಮರುಪಾವತಿಸುವಂತೆ ನೋಟಿಸ್:
ಗುರುವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಶಂಕರ ಗುಹಾ ದ್ವಾರಕಾನಾಥ್, ಬ್ಯಾಂಕ್‌ನ ಆಡಳಿತ ಮಂಡಳಿ ಯಾರದ್ದೋ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಅವರ ಹೆಸರಲ್ಲಿ ತಾವು ಸಾಲ ಪಡೆದು ವಂಚನೆ ಮಾಡಿರುವುದು ಇದರಿಂದ ಸ್ಪಷ್ಟವಾಗಿ ತಿಳಿದು ಬರುತ್ತಿದೆ. ತಾವು ಬ್ಯಾಂಕ್‌ನಿಂದ ಸಾಲ ಪಡೆಯದಿದ್ದರೂ, ಕೋಟ್ಯಂತರ ರೂಪಾಯಿ ಸಾಲ ವಾಪಸ್ ಮಾಡುವಂತೆ ಬ್ಯಾಂಕ್ ನೋಟಿಸ್ ಕಳುಹಿಸಿರುವುದರಿಂದ ನೋಟಿಸ್ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.
ಬ್ಯಾಂಕ್‌ಗೆ ನೋಟಿಸ್:
ನನ್ನನ್ನು ಸಂಪರ್ಕಿಸಿ ಮುಂದೆ ಏನು ಮಾಡಬೇಕೆಂದು ಕೇಳಿರುತ್ತಾರೆ. ಅವರಿಗೆ ವಕೀಲರ ನೆರವು ಕೊಡಿಸಿ, ಅವರ ಮೂಲಕ ಬ್ಯಾಂಕ್‌ನಿಂದ ನೋಟಿಸ್ ಪಡೆದವರ ಠೇವಣಿಯ ಬಗ್ಗೆ ಹಾಗೂ ಸಾಲದ ಬಗ್ಗೆ ವಿವರವಾಗಿ ಮಾಹಿತಿ ನೀಡುವಂತೆ ಬ್ಯಾಂಕ್‌ಗೆ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ತಲುಪಿ 10 ದಿನಗಳಾದರೂ ಬ್ಯಾಂಕ್‌ನಿಂದ ಯಾವುದೇ ಉತ್ತರ ಬಂದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.