ಕರ್ನಾಟಕ

karnataka

ETV Bharat / city

ಶಾಲೆಗಳ ಮಾನ್ಯತೆ ನವೀಕರಣಕ್ಕೆ ಆನ್​​ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ - ಶಿಕ್ಷಣ ಇಲಾಖೆ

ಈಗಾಗಲೇ ತಂತ್ರಾಂಶದ ಬಗ್ಗೆ ವಿ.ಸಿ ಮುಖಾಂತರ ತರಬೇತಿ ನೀಡಲಾಗಿದೆ. ಅದರಂತೆ ವಿಳಂಬ ಅಥವಾ ಅನವಶ್ಯಕ ಗೊಂದಲಗಳಿಗೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ತಾಂತ್ರಿಕವಾಗಿ ಯಾವುದೇ ಅಡಚಣೆ/ಸಮಸ್ಯೆಗಳಿದ್ದಲ್ಲಿ ತಾಂತ್ರಿಕ/ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿ ಸಲಹೆ ಪಡೆದು ನಿಗದಿಪಡಿಸಿದ ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ..

Extension of date for online application for renewal of accreditation of schools
ಶಾಲೆಗಳ ಮಾನ್ಯತೆ ನವೀಕರಣಕ್ಕೆ ಆನ್​​ಲೈನ್ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

By

Published : Dec 11, 2021, 6:56 PM IST

ಬೆಂಗಳೂರು: ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿತ್ತು. ಇದೀಗ ಅದನ್ನು ಡಿಸೆಂಬರ್ 28ರವರೆಗೆ ವಿಸ್ತರಿಸಲಾಗಿದೆ. ಈಗ ಮತ್ತೆ 14 ದಿನಗಳ ಕಾಲಾವಕಾಶ ನೀಡಲಾಗಿದೆ.‌

ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದ ಪ್ರಾಧಿಕಾರಿಗಳು ಸಂಬಂಧಿಸಿದ ಶಾಲೆಗಳ ಮಾನ್ಯತೆ ನವೀಕರಣ ನೀಡಬೇಕಿದೆ. ಖಾಸಗಿ ಶಾಲೆಗಳು ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣವನ್ನು ಇಲಾಖೆಯು ಪರಿಷ್ಕರಿಸಿ ತಂತ್ರಾಂಶದ ಮೂಲಕವೇ ನವೀಕರಿಸಲು ಸೂಚನೆ ನೀಡಿತ್ತು.

ಅದರಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಬಿಡುಗಡೆಗೊಳಿಸಲಾಗಿತ್ತು. ಆದರೆ, ಹೊಸದಾಗಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದರಿಂದ ತಂತ್ರಾಂಶದಲ್ಲಿ ಮಾಹಿತಿ/ದಾಖಲೆಗಳನ್ನು ಸಲ್ಲಿಸಲು ವಿಳಂಬವಾಗುತ್ತಿತ್ತು. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗಳು ಮತ್ತು ಇಲಾಖಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡುವಂತೆ ಕೋರಿದರು.

ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ, ಆಡಳಿತ ಮಂಡಳಿಗಳು 2020-21 ಮತ್ತು 2021-22ನೇ ಸಾಲಿನಲ್ಲಿ ನೋಂದಣಿಯಾದ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ 2021-22ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ.‌

ಈ ಹಿಂದೆ ನಿಗದಿ ಪಡಿಸಲಾಗಿದ್ದ ಡಿಸೆಂಬರ್ 14ರ ಬದಲಿಗೆ ಡಿಸೆಂಬರ್ 28ರವರೆಗೆ ಅಂದರೆ 14 ದಿನಗಳನ್ನು ವಿಸ್ತರಿಸಿದೆ. ಇನ್ನು ಆಡಳಿತ ಮಂಡಳಿಗಳಿಂದ ಯಾವುದೇ ರೀತಿಯ ಭೌತಿಕ ದಾಖಲೆಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿದೆ.

ಇದನ್ನೂ ಓದಿ:ಬೆಳಗಾವಿ ಅಧಿವೇಶನಕ್ಕೆ ಖಾಕಿ ಕಣ್ಗಾವಲು ; ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿ ಟೌನ್​ಶಿಪ್​​ ನಿರ್ಮಾಣ

ಈಗಾಗಲೇ ತಂತ್ರಾಂಶದ ಬಗ್ಗೆ ವಿ.ಸಿ ಮುಖಾಂತರ ತರಬೇತಿ ನೀಡಲಾಗಿದೆ. ಅದರಂತೆ ವಿಳಂಬ ಅಥವಾ ಅನವಶ್ಯಕ ಗೊಂದಲಗಳಿಗೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ತಾಂತ್ರಿಕವಾಗಿ ಯಾವುದೇ ಅಡಚಣೆ/ಸಮಸ್ಯೆಗಳಿದ್ದಲ್ಲಿ ತಾಂತ್ರಿಕ/ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿ ಸಲಹೆ ಪಡೆದು ನಿಗದಿಪಡಿಸಿದ ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.

ABOUT THE AUTHOR

...view details