ಕರ್ನಾಟಕ

karnataka

ETV Bharat / city

ಖಾತೆ ಹಂಚಿಕೆ ಆಗದಿರುವುದು ನಾಚಿಕೆಗೇಡಿನ ಸಂಗತಿ: ದಿನೇಶ್​ ಗುಂಡೂರಾವ್​ - karnataka political development

ರಾಜ್ಯದಲ್ಲಿ ಸಚಿವ ಸಂಪುಟ ರಚನೆಯಾಗಿದ್ದರೂ ಖಾತೆ ಹಂಚಿಕೆ ಆಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮಂತ್ರಿಮಂಡಲ‌ ರಚನೆಯಂತೆ ಇದಕ್ಕೂ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪಿಸಿದರು.

expansion of the Karnataka cabinet will take time

By

Published : Aug 24, 2019, 11:57 PM IST

ಬೆಂಗಳೂರು: ರಾಜ್ಯದಲ್ಲಿ ಖಾತೆ ಹಂಚಿಕೆ ಆಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಮಂತ್ರಿಮಂಡಲ‌ ರಚನೆಗೂ ಸಮಯ ತೆಗೆದುಕೊಂಡರು. ಈಗ ಖಾತೆ ಹಂಚಿಕೆಗೂ ಅದನ್ನೇ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ನೀಡಬೇಕು ಎಂಬ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ಕೈಲಾಗುವುದಿಲ್ಲ ಎಂದರೆ ಹೇಗೆ? ಅದಕ್ಕೂ ದೆಹಲಿಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರದಲ್ಲಿ ಎಲ್ಲವೂ ಸ್ಥಗಿತವಾಗಿದೆ. ನಿಜವಾಗಲೂ ಈ ಸರ್ಕಾರ ಟೇಕ್ ಆಫ್ ಅಲ್ಲ. ಇಂಜಿನ್​​​ಗೆ ಕೀ ಹಾಕಿ ಆನ್ ಮಾಡುವುದಕ್ಕೇ ಹೋಗಿಲ್ಲ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಿನ್ನೆ ನೆಹರೂ ಮಾಡಿದ ತಪ್ಪನ್ನು ನಾವು ಸರಿಪಡಿಸುತ್ತೇವೆ ಎಂಬ ಹೇಳಿಕೆಗತೆ ಪ್ರತಿಕ್ರಿಯಿಸಿದ ಅವರು, ನೆಹರೂ ಅವರ ಬಗ್ಗೆ ಮಾತನಾಡುವ ಅರ್ಹತೆಯೇ ಅವರಿಗಿಲ್ಲ. ನೆಹರೂ ಅವರಿಂದಲೇ ಜಮ್ಮು ಕಾಶ್ಮೀರ ಭಾರತದ ಭಾಗವಾಗಿದ್ದು. ದೇಶಕ್ಕೆ ಇವರ ಕೊಡುಗೆ ಏನು. ಅದರ ಬಗ್ಗೆ ಮಾತನಾಡಲಿ. ಈ ರೀತಿ ದಾರಿ ತಪ್ಪಿಸುವ ಹೇಳಿಕೆ ನೀಡಬಾರದು ಎಂದು ವಾಗ್ದಾಳಿ ನಡೆಸಿದರು.

ಆರ್ಥಿಕ ವ್ಯವಸ್ಥೆ ಪ್ರಗತಿಯಲ್ಲಿದ್ದ ವೇಳೆ ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಜಾರಿಗೆ ಮತ್ತು ಅವೈಜ್ಞಾನಿಕ ನೀತಿಗಳಿಂದ ಅದು ದಾರಿ ತಪ್ಪಿತು. ಈಗ ಬಿಗಡಾಯಿಸಿರುವ ಅರ್ಥ ವ್ಯವಸ್ಥೆ ಬಗ್ಗೆ ಯೋಚಿಸಬೇಕೇ‌ ವಿನಃ, ಹಿಂದೆ ಏನಾಯಿತು, ಅವರು ಏನು ಮಾಡಿದರು ಎಂದು ಸಮಯ ವ್ಯರ್ಥ ಮಾಡಬಾರದು. ಆರ್ಥಿಕ ನೀತಿಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಆರ್ಥಿಕತೆ ಸಂಪೂರ್ಣ ಹಾಳಾಗಿದೆ‌‌ ಎಂದರು.

ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ನೆಹರೂ ಕಾರಣರಾಗಿದ್ದಾರೆ. ನೆಹರೂ ಇರಲಿಲ್ಲ ಅಂದಿದ್ದರೆ, ಜಮ್ಮು ಕಾಶ್ಮೀರ ಭಾರತದ ಅಂಗವಾಗುತ್ತಿರಲಿಲ್ಲ. ಜನರನ್ನು ಮೆಚ್ಚಿಸಲು ಟೀಕೆ‌ ಮಾಡೋರು ಇತಿಹಾಸ ಅರ್ಥ ಮಾಡಬೇಕು. ಅವರಿಗೆ ದೇಶದ ಹಿತಕ್ಕಿಂತ ತಮ್ಮ‌ರಾಜಕೀಯ ಬೇಳೆ‌ ಬೇಯಿಸುವುದು ಮುಖ್ಯವಾಗಿದೆ ಎಂದು ಕಿಡಿ ಕಾರಿದರು.

ABOUT THE AUTHOR

...view details