ಬೆಂಗಳೂರು: ಕೋವಿಡ್ ರೋಗಿಗಳಿಂದ ತಮಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ಮಾಜಿ ಸಚಿವ ಕೃಷ್ಣ ಬೈರೇಗೌಡ ತಪಾಸಣೆ ಕಾರ್ಯ ನಡೆಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಸಚಿವ ಕೃಷ್ಣ ಬೈರೇಗೌಡ ತಮ್ಮ ಕ್ಷೇತ್ರ ವ್ಯಾಪ್ತಿಯ ಕೋವಿಡ್ ರೋಗಿಗಳು ಮಾಡಿದ ದೂರಿಗೆ ಸ್ಪಂದಿಸಿದ ಮಾಜಿ ಸಚಿವ ಖುದ್ದು ಕಾರ್ಯಾಚರಣೆಗೆ ಇಳಿದು ಪರಿಶೀಲನೆ ನಡೆಸಿದ್ದಾರೆ. ಸರಿಯಾಗಿ ಟೆಸ್ಟ್ ಮಾಡ್ತಿಲ್ಲ, ಇಂಜೆಕ್ಷನ್ ಸಿಗ್ತಿಲ್ಲ. ಹಾಸಿಗೆ ಸಿಗ್ತಿಲ್ಲ ಎಂಬ ದೂರು ಬಂದ ಹಿನ್ನೆಲೆ ಈ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಕೂಲಂಕಷವಾಗಿ ಪರಿಶೀಲಿಸಿದ ಅವರು, ತಪಾಸಣೆ ಹೇಗೆ ನಡೆದಿದೆ, ಎಷ್ಟು ಟೆಸ್ಟ್ ಮಾಡಲಾಗಿದೆ. ಟೆಸ್ಟ್ ಮಾಡಿದ್ದನ್ನ ಸರಿಯಾಗಿ ದಾಖಲಿಸಲಾಗಿದೆಯೇ? ಲಸಿಕೆ ಯಾರಿಗೆ ಕೊಡ್ತಿದ್ದೀರಾ? ಇಲ್ಲಿಯವರೆಗೆ ಲಸಿಕೆ ಎಷ್ಟು ಕೊಡಲಾಗಿದೆ. ಟೆಸ್ಟ್ ಮಾಡಿದ ಡೇಟಾ ಸರಿಯಾಗಿ ದಾಖಲಿಸಲಾಗಿದೆಯೇ? ಎಂಬುದೂ ಸೇರಿದಂತೆ ವಿವಿಧ ವಿಚಾರಗಳನ್ನು ಆಸ್ಪತ್ರೆ ವೈದ್ಯರ ಮೂಲಕ ಪಡೆದಿದ್ದಾರೆ.
ತಪಾಸಣೆ ಸರಿಯಾಗಿ ಮಾಡಿ, ದಾಖಲೆ ಸಂಗ್ರಹ ಮಾಡಿ. ಯಾವುದೇ ತಪ್ಪುಗಳಾಗದಂತೆ ಗಮನಕೊಡಿ. ಕ್ಷೇತ್ರದ ಜನರಿಂದ ಸಮಸ್ಯೆಗಳು ಬರ್ತಿವೆ. ಬೇರೆ ಬೇರೆ ರೋಗ ಇರುವವರಿಗೂ ಚಿಕಿತ್ಸೆ ಕೊಟ್ಟು ಕಳಿಸಿ. ಯಾರನ್ನೂ ವಾಪಸ್ ಕಳಿಸುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುವ ಕೃಷ್ಣಬೈರೇಗೌಡ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.