ಕರ್ನಾಟಕ

karnataka

ETV Bharat / city

ಹೆಚ್​ಡಿಕೆ ಭೇಟಿ ಮಾಡಿದ ರೊಟ್ಟಿ ಉಡುಗೊರೆ ನೀಡಿದ್ದ ಹುಬ್ಬಳ್ಳಿ ರೈತ

ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಜೋಳದರೊಟ್ಟಿಯನ್ನು ಉಡುಗೊರೆಯಾಗಿ ಕಳುಹಿಸಿದ್ದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ರೈತ ಗೋವಿಂದಪ್ಪ ಶ್ರೀಹರಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.

KN_BNG_02_HD_Kumaraswamy_House_Script_9024736
ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾದ ಜೋಳ,ರೊಟ್ಟಿ ಉಡುಗೊರೆ ನೀಡಿದ್ದ ಹುಬ್ಬಳ್ಳಿ ರೈತ

By

Published : Dec 23, 2019, 7:26 PM IST

ಬೆಂಗಳೂರು: ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಜೋಳದರೊಟ್ಟಿಯನ್ನು ಉಡುಗೊರೆಯಾಗಿ ಕಳುಹಿಸಿದ್ದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ರೈತ ಗೋವಿಂದಪ್ಪ ಶ್ರೀಹರಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಭೇಟಿಯಾದ ಜೋಳ,ರೊಟ್ಟಿ ಉಡುಗೊರೆ ನೀಡಿದ್ದ ಹುಬ್ಬಳ್ಳಿ ರೈತ

ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಇಂದು ಮಧ್ಯಾಹ್ನ ಭೇಟಿ ನೀಡಿದ ರೈತ ಗೋವಿಂದಪ್ಪ ಶ್ರೀಹರಿ, ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಕೃತಜ್ಞತೆ ಸಲ್ಲಿಸಿದರು. ಸುಮಾರು ಅರ್ಧಗಂಟೆಗಳ ಕಾಲ ರೈತ ಗೋವಿಂದಪ್ಪ ಶ್ರೀಹರಿ ಹಾಗೂ ಅವರ ಜೊತೆ ಬಂದಿದ್ದ ಇತರ ರೈತರ ಜೊತೆ ಮಾತುಕತೆ ನಡೆಸಿದರು. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ, ಸಾಲ ಹೆಚ್ಚಳದಿಂದ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡಿದ್ದೇನೆ ಎಂದು ಗೋವಿಂದಪ್ಪ ಪತ್ರ ಬರೆದಿದ್ದರು. ಆ ರೈತ ಬರೆದಿದ್ದ ಪತ್ರದಲ್ಲಿದ್ದ ನಂಬರ್ ಗೆ ತಕ್ಷಣವೇ ಫೋನ್​ ಮಾಡಿದ್ದ ಕುಮಾರಸ್ವಾಮಿ, ಸಾಲ ಮನ್ನಾ ಆಗುತ್ತೆ, ಆತ್ಮಹತ್ಯೆಯಂತಹ ನಿರ್ಧಾರ ಮಾಡಿಕೊಳ್ಳಬಾರದು ಎಂದು ಸಾಂತ್ವನದ ಮಾತುಗಳನ್ನು ಆಡಿದ್ದರು.

ನಂತರ ಆ ರೈತರ ಸಾಲಮನ್ನಾ ಕೂಡ ಆಯಿತು. ಅಷ್ಟರಲ್ಲಿ ಕುಮಾರಸ್ವಾಮಿಯವರು ರಾಜಕೀಯ ಬೆಳವಣಿಗೆಗಳ ನಡುವೆ ಅಧಿಕಾರ ಕಳೆದುಕೊಂಡರು. ಆದರೆ, ಕುಮಾರಸ್ವಾಮಿಯವರ ಸಾಂತ್ವನ ಮತ್ತು ಸಾಲಮನ್ನಾ ಮಾಡಿದ್ದನ್ನು ಸ್ಮರಣೆ ಮಾಡಿದ ರೈತ ತನ್ನ ಹೊಲದಲ್ಲಿ ಬೆಳೆದ ಬೆಳೆಯಲ್ಲಿ ಜೋಳದ ರೊಟ್ಟಿ , ಶೇಂಗಾ ಚಟ್ನಿ ಪುಡಿ, ತಯಾರು ಮಾಡಿ ಒಂದು ದೊಡ್ಡ ಬಾಕ್ಸ್ ಮೂಲಕ‌ ಇತ್ತೀಚೆಗೆ ಕುಮಾರಸ್ವಾಮಿಯವರ ಜೆಪಿ ನಗರ ನಿವಾಸಕ್ಕೆ ಕೊರಿಯರ್ ಮಾಡಿ ವಿಶೇಷ ಕೃತಜ್ಞತೆ ಸಲ್ಲಿಸಿದ್ದರು. ಹಾಗಾಗಿಯೇ ರೈತ ಗೋವಿಂದಪ್ಪ ಶ್ರೀಹರಿಯವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಇಂದು ತಮ್ಮ ಸಂತಸ ಹಂಚಿಕೊಂಡರು ಎನ್ನಲಾಗಿದೆ.

ABOUT THE AUTHOR

...view details