ಬೆಂಗಳೂರು:ನಮ್ಮ ಪೂರ್ವಿಕರ ಜೀವನ ಶೈಲಿ, ಆಹಾರ ಪದ್ಧತಿ ತಪ್ಪದೇ ಅನುಸರಿಸಿದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ, ಖ್ಯಾತ ಹೃದಯ ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ ವೇಳೆ 'ವರ್ಕ್ ಫ್ರಮ್ ಹೋಂ' ಟ್ರೆಂಡ್ ಹೆಚ್ಚಾಗಿದೆ. ಇದು ಆರೋಗ್ಯಕ್ಕೆ ಹಾನಿಕರವಾಗಿದೆ. ಇದನ್ನ 'ಸಿಟ್ಟಿಂಗ್ ಡಿಸೀಸ್' ಎಂದೇ ವೈದ್ಯಕೀಯವಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡದ ಬದುಕಿನಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗಿವೆ. ವಯೋವೃದ್ಧರಷ್ಟೇ ಅಲ್ಲದೆ 20ರಿಂದ 35ರ ವಯಸ್ಕರಲ್ಲಿಯೂ ಹೃದಯ ರೋಗ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ವರದಿಯಾಗತೊಡಗಿವೆ ಎಂದು ಹೇಳಿದರು.