ಕರ್ನಾಟಕ

karnataka

ETV Bharat / city

'ಮುಸಲ್ಮಾನ ಗೂಂಡಾಗಳು ಶಿವಮೊಗ್ಗದ ಯುವಕನ ಕೊಲೆ ಮಾಡಿದ್ದಾರೆ': ಸಚಿವ ಕೆ.ಎಸ್‌.ಈಶ್ವರಪ್ಪ - ಮಸ್ಲಿಂ ಗೂಂಡಾ ಹೇಳಿಕೆ ನೀಡಿದ ಈಶ್ವರಪ್ಪ

ಶಿವಮೊಗ್ಗದಲ್ಲಿ ಭಜರಂಗ ದಳ ಕಾರ್ಯಕರ್ತನನ್ನು ಮುಸಲ್ಮಾನ ಗೂಂಡಾಗಳು ಕೊಲೆ ಮಾಡಿದ್ದು, ತನಿಖೆ ಮಾಡುತ್ತೇವೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ದೂರಿದ್ದಾರೆ.

Eshwarappa On Shivamogga Bhajaranga dal activist murder
ಶಿವಮೊಗ್ಗದಲ್ಲಿ ಮುಸಲ್ಮಾನ್ ಗೂಂಡಾಗಳಿಂದ ಯುವಕನ ಹತ್ಯೆ

By

Published : Feb 21, 2022, 11:00 AM IST

ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನನ್ನು ಮುಸಲ್ಮಾನ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಪ್ರಚೋದನಕಾರಿ ಹೇಳಿಕೆಯಿಂದ ಗೂಂಡಾಗಿರಿ: ಬೆಂಗಳೂರಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಎಂದೂ ಕೂಡ ಈ ಗೂಂಡಾಗಿರಿ ಇರಲಿಲ್ಲ. ಆದ್ರೆ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಕೊಟ್ಟ ಪ್ರಚೋದನಕಾರಿ ಹೇಳಿಕೆಯಿಂದ ಈ ಗೂಂಡಾಗಿರಿ ನಡೆಯುತ್ತಿದೆ. ಅದನ್ನು ನಾವು ದಮನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


ಹತ್ಯೆಯಾದ ಯುವಕನಿಗೆ ಮದುವೆಯಾಗಿಲ್ಲ. ಆತ ತುಂಬಾ ಪ್ರಾಮಾಣಿಕನಾಗಿದ್ದ. ಈ ಬಗ್ಗೆ ಸಿಎಂ, ಗೃಹ ಸಚಿವರ ಜೊತೆ ಮಾತನಾಡಿದ್ದು, ತನಿಖೆ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಭಾನುವಾರ ರಾತ್ರಿ ಭಜರಂಗದಳ ಕಾರ್ಯಕರ್ತ ಹರ್ಷಾ ಎಂಬಾತನ ಹತ್ಯೆ ನಡೆದಿದ್ದು, ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ನಿಷೇಧಾಜ್ಞೆ ಜಾರಿ

ABOUT THE AUTHOR

...view details