ಬೆಂಗಳೂರು:ಲೋಕಸಭಾ ಚುನಾವಣೆ ಸನಿಹದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ಅಭ್ಯರ್ಥಿಗಳ ಪರ ಕಾರ್ಪೋರೇಟರ್ಗಳು ಸಹ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೀಗ ಅಂತಹ ಕಾರ್ಪೋರೇಟರ್ಗಳಿಗೆ ಚುನಾವಣಾಧಿಕಾರಿಗಳು ಶಾಕ್ ನೀಡಿದ್ದಾರೆ.
ಜನರಿಗೆ ಆಮಿಷವೊಡ್ಡಿದ ಆರೋಪ: ಕಾರ್ಪೋರೇಟರ್ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ
ಬೆಂಗಳೂರು ನಗರದ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್ಗಳ ಮನೆಗಳ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾರ್ಪೊರೇಟರ್ ಮನೆಗಳ ಮೇಲೆ ದಾಳಿ
ತಮ್ಮ ಪಕ್ಷ ಅಭ್ಯರ್ಥಿಗಳಿಗೆ ಮತ ಹಾಕುವಂತೆ ನಗರದ ಹಾಲಿ ಹಾಗೂ ಮಾಜಿ ಕಾರ್ಪೋರೇಟರ್ಗಳು ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಂದಿನಿ ಬಡಾವಣೆ ಮಾಜಿ ಪಾಲಿಕೆ ಸದಸ್ಯ ಜಯಪ್ಪ ರೆಡ್ಡಿ, ಸುಬ್ರಹ್ಮಣ್ಯನಗರದ ವಾರ್ಡ್ನ ಮಂಜುನಾಥ್, ಬೋವಿಪಾಳ್ಯ ವಾರ್ಡ್ನ ಮಹದೇವ್ ಎಂಬುವರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ ದಾಳಿ ನಡೆಸಿದ ಚುನಾವಣಾಧಿಕಾರಿಗಳಿಗೆ ಇವರ ಮನೆಗಳಲ್ಲಿ ಏನೂ ಸಿಕ್ಕಿಲ್ಲ. ಹಾಗಾಗಿ ವಾಪಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.