ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಉಗಾಂಡ ಮೂಲದ ಮಹಿಳೆಯರಿಂದ ಡ್ರಗ್ಸ್ ಮಾರಾಟ: ಟೂರಿಸ್ಟ್, ಸ್ಟೂಡೆಂಟ್​ ಹೆಸರಲ್ಲಿ ಬಂದು ದಂಧೆ

ನಗರದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಬೀಳುತ್ತಲೇ ಇಲ್ಲ. ವಿದೇಶಿಗರಿಂದ ಮಾದಕ ವಸ್ತು ಮಾರಾಟ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

ಬೆಂಗಳೂರಲ್ಲಿ ಉಗಾಂಡ ಮೂಲದ ಮಹಿಳೆಯರಿಂದ ಡ್ರಗ್ಸ್ ಮಾರಾಟ
ಬೆಂಗಳೂರಲ್ಲಿ ಉಗಾಂಡ ಮೂಲದ ಮಹಿಳೆಯರಿಂದ ಡ್ರಗ್ಸ್ ಮಾರಾಟ

By

Published : Jul 9, 2022, 7:24 PM IST

Updated : Jul 9, 2022, 10:51 PM IST

ಬೆಂಗಳೂರು:ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಉಗಾಂಡ ಮೂಲದ ಮಹಿಳೆಯರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಆಫ್ರಿಕಾ‌ ಮೂಲದ ನಮ್ಯುಟೆಬಿ ಶಮ್ರಿಯಾ, ನನ್ಫುಕಾ ಫಿಯೊನ ಬಂಧಿತರು. 2020ರಲ್ಲಿ ಟೂರಿಸ್ಟ್ ವಿಸಾದಡಿ ಎ1 ಆರೋಪಿ ನಮ್ಯುಟೆಬಿ, 2021ರಲ್ಲಿ ಮೆಡಿಕಲ್ ವೀಸಾದಡಿ ನನ್ಫುಕಾ ಫಿಯೊನ‌ ನಗರಕ್ಕೆ ಆಗಮಿಸಿದ್ದರು. ವೀಸಾ ಅವಧಿ ಮುಗಿದರೂ ಇಬ್ಬರೂ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ಸಿಬ್ಬಂದಿ, ಇಬ್ಬರನ್ನು ಬಂಧಿಸಿ 1.50 ಲಕ್ಷ ರೂಪಾಯಿ ಬೆಲೆ ಬಾಳುವ ಎಂಡಿ ಕ್ರಿಸ್ಟಲ್ಸ್, 2 ಮೊಬೈಲ್ ಫೋನ್ ಗಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಡ್ರಗ್ಸ್ ಮಾರಾಟ

ಇಬ್ಬರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

(ಇದನ್ನೂ ಓದಿ: ಡ್ರಗ್ಸ್ ಮಾರಿ 5ಎಕರೆ ಜಮೀನು ಖರೀದಿ: ಆರೋಪಿಯ ಎಲ್ಲಾ ಆಸ್ತಿ ಮುಟ್ಟುಗೋಲು, ಸಿಸಿಬಿಯಿಂದ ಮೊದಲ ಅಸ್ತ್ರ)

Last Updated : Jul 9, 2022, 10:51 PM IST

ABOUT THE AUTHOR

...view details