ಕರ್ನಾಟಕ

karnataka

ETV Bharat / city

ಡ್ರಗ್ಸ್ ಮಾರಾಟ ಪ್ರಕರಣ: ಕೆಂಪೇಗೌಡ ಚಿತ್ರದ ನಿರ್ಮಾಪಕರ ಕಚೇರಿ ಮೇಲೆ ರೇಡ್ - ಕೆಂಪೇಗೌಡ ಚಿತ್ರ ನಿರ್ಮಾಪಕನ ಮೇಲೆ ಪೊಲೀಸ್ ದಾಳಿ

ವಿದೇಶಿ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿದ್ದ ಆರೋಪ ಹಿನ್ನೆಲೆ ಗೋವಿಂದಪುರ ಇನ್ಸ್​​ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡವು ಡಾಲರ್ಸ್ ಕಾಲೋನಿಯ 3ನೇ ಮುಖ್ಯ ರಸ್ತೆಯಲ್ಲಿರುವ ಶಂಕರಗೌಡ ಅವರ ಕಚೇರಿ ಮೇಲೆ ದಾಳಿ ಮಾಡಿದೆ.

ಕೆಂಪೇಗೌಡ ಚಿತ್ರದ ನಿರ್ಮಾಪಕರ ಕಚೇರಿ ಮೇಲೆ ರೇಡ್
ಕೆಂಪೇಗೌಡ ಚಿತ್ರದ ನಿರ್ಮಾಪಕರ ಕಚೇರಿ ಮೇಲೆ ರೇಡ್

By

Published : Mar 8, 2021, 10:18 PM IST

Updated : Mar 8, 2021, 10:47 PM IST

ಬೆಂಗಳೂರು:ಡ್ರಗ್ಸ್ ಮಾರಾಟ ಪ್ರಕರಣ ಸಂಬಂಧ ಸಿನಿಮಾ ನಿರ್ಮಾಪಕ ಶಂಕರಗೌಡ ಕಚೇರಿ ಮೇಲೆ ಪೊಲೀಸರು ಸೋಮವಾರ ಸಂಜೆ ದಾಳಿ ಮಾಡಿದ್ದಾರೆ.

ವಿದೇಶಿ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿದ್ದ ಆರೋಪ ಹಿನ್ನೆಲೆ ಗೋವಿಂದಪುರ ಇನ್ಸ್​​ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡವು ಡಾಲರ್ಸ್ ಕಾಲೋನಿಯ 3ನೇ ಮುಖ್ಯ ರಸ್ತೆಯಲ್ಲಿರುವ ಶಂಕರಗೌಡ ಅವರ ಕಚೇರಿ ಮೇಲೆ ದಾಳಿ ಮಾಡಿದೆ.

ನ್ಯಾಯಾಲಯದಿಂದ ಸರ್ಚ್​ ವಾರೆಂಟ್ ಪಡೆದು ನಿರ್ಮಾಪಕ ಶಂಕರಗೌಡ ಕಚೇರಿ ಮೇಲೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕೆಂಪೇಗೌಡ ಚಿತ್ರದ ನಿರ್ಮಾಪಕರ ಕಚೇರಿ ಮೇಲೆ ರೇಡ್

ಈ ಹಿಂದೆ ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರನನ್ನ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ವೇಳೆ ಶಂಕರ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಬಗ್ಗೆ ಬಾಯ್ಬಿಟ್ಟಿದ್ದ ಎನ್ನಲಾಗಿದೆ. ಮಸ್ತಾನ್ ಮಾಹಿತಿ ಮೇರೆಗೆ ಡಾಲರ್ಸ್ ಕಾಲೋನಿಯ ಶಂಕರ್ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ನಿರ್ಮಾಪಕ ಶಂಕರ್ ಗೌಡ, ಓರ್ವ ಮ್ಯಾನೇಜರ್, ನಾಲ್ವರು ಕೆಲಸಗಾರರು ಕಚೇರಿಯಲ್ಲಿದ್ದರು ಎಂದು ತಿಳಿದುಬಂದಿದೆ. ಸದ್ಯ ಮ್ಯಾನೇಜರ್ ಹಾಗೂ ಶಂಕರ್ ಗೌಡ ಅವರ ಮೊಬೈಲ್​​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆಂಪೇಗೌಡ ಸೇರಿದಂತೆ ಹಲವು ಸಿನಿಮಾಗಳನ್ನು ಶಂಕರಗೌಡ ಅವರು ನಿರ್ಮಾಣ ಮಾಡಿದ್ದರು.

Last Updated : Mar 8, 2021, 10:47 PM IST

ABOUT THE AUTHOR

...view details