ಬೆಂಗಳೂರು :ನಗರದ ಜಯನಗರ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ವೈದ್ಯಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಜಯನಗರ ಆಸ್ಪತ್ರೆಗೆ ಸಚಿವ ಡಾ.ಕೆ ಸುಧಾಕರ್ ದಿಢೀರ್ ಭೇಟಿ, ವೈದ್ಯಾಧಿಕಾರಿಗಳಿಗೆ ತರಾಟೆ!!
ಈ ಹಿಂದೆ ಹಲವು ಆಸ್ಪತ್ರೆಗಳಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಡಾ.ಕೆ ಸುಧಾಕರ್ ನೇರವಾಗಿ ಸೋಂಕಿತರ ಬಳಿಯೇ ಆಸ್ಪತ್ರೆಯವರು ನೀಡುತ್ತಿರುವ ಊಟ ಹೇಗಿದೆ ಅಂತಾ ಕೇಳಿದ್ರು..
ಸಚಿವರ ಭೇಟಿ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬರು ಕೋವಿಡ್ ರಿಪೋರ್ಟ್ ಇನ್ನೂ ತಮ್ಮ ಕೈಸೇರಿಲ್ಲ. ಬೇರೆ ರಾಜ್ಯದಿಂದ ಬಂದವರನ್ನ ಅಲೆದಾಡಿಸುತ್ತಿರುವುದಾಗಿ ದೂರು ನೀಡಿದರು. ನಂತರ ಆಸ್ಪತ್ರೆ ಒಳಹೋದ ಸಚಿವರು, ಸಿಬ್ಬಂದಿಗೆ ನೀಡುವ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸರಿಯಾದ ಮಾಹಿತಿ ನೀಡದ ವೈದ್ಯಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸರ್ಕಾರ ನೀಡುವ ಮಾರ್ಗಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು.
ಬಳಿಕ ಕೋವಿಡ್ ವಾರ್ಡ್ ಹಾಗೂ ಐಸಿಯುನಲ್ಲಿರುವ ಸೋಂಕಿತರೊಂದಿಗೆ ಮೊಬೈಲ್ ವಿಡಿಯೋ ಕಾಲ್ ಮುಖಾಂತರ ಮಾತುಕತೆ ನಡೆಸಿದರು. ಈ ಹಿಂದೆ ಹಲವು ಆಸ್ಪತ್ರೆಗಳಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಡಾ.ಕೆ ಸುಧಾಕರ್ ನೇರವಾಗಿ ಸೋಂಕಿತರ ಬಳಿಯೇ ಆಸ್ಪತ್ರೆಯವರು ನೀಡುತ್ತಿರುವ ಊಟ ಹೇಗಿದೆ ಅಂತಾ ಕೇಳಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ರೋಗಿಗಗಳು ಎಲ್ಲವೂ ಗುಣಮಟ್ಟದಲ್ಲಿರುವುದಾಗಿ ತಿಳಿಸಿದರು. ಜಯನಗರ ಆಸ್ಪತ್ರೆಯ ನಂತರ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೂ ಭೇಟಿ ನೀಡಿ, ಅಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು.