ಬೆಂಗಳೂರು: ಹವಾಮಾನ ವೈಪರಿತ್ಯದಿಂದ ರಾಜಧಾನಿ ಬೆಂಗಳೂರಿನ ಜನರಿಗೆ ಕೆಮ್ಮು, ಜ್ವರ, ಶೀತದಂತಹ (climate change health issues) ಆನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ನಗರದ ಬಹುತೇಕ ಕ್ಲಿನಿಕ್ಗಳು ಜನರಿಂದ ತುಂಬಿವೆ. ಟ್ರಾಫಿಕ್ ಮಧ್ಯ ಮಳೆಗೆ ಸಿಲುಕಿ ನೆನೆದು ಎರಡು ದಿನ ಕಳೆಯುತ್ತಿದ್ದಂತೆ ನೆಗಡಿ ಶುರುವಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೈದ್ಯ ರಾಜು ಕೃಷ್ಣಮೂರ್ತಿಯವರು ಕೆಲ ಸಲಹೆಗಳನ್ನು ನೀಡಿದ್ದಾರೆ.
- ಚಳಿ ವಾತಾವರಣ ಇದ್ದಾಗ ಕಾಡುವ ಸಮಸ್ಯೆಗಳು
- ಅಸ್ತಮಾ ಇರೋರಿಗೆ ಉಸಿರಾಟಕ್ಕೂ ಹೆಚ್ಚು ತೊಂದರೆಯುಂಟು ಮಾಡಬಹುದು
- ಸೈನಸ್ ಸಮಸ್ಯೆ ಇರುವವರಿಗೆ ಮೂಗು ಕಟ್ಟುವಿಕೆ
- ಅರ್ಧತಲೆನೋವು
- ಶೀತದಿಂದ ಕಿವಿನೋವು
- ಗಂಟಲುನೋವು, ಅಷ್ಟೇ ಅಲ್ಲದೇ ಈ ಸಮಯದಲ್ಲಿ ತಲೆಕೂದಲು ಉದುರುವುದು, ತಲೆಯ ಹೊಟ್ಟು ಹೆಚ್ಚಾಗುವುದು. ತ್ವಚೆಯ ಚರ್ಮ ಒಡೆಯುವುದು
- ಆಹಾರ ಪದ್ಧತಿ ಹೀಗಿರಲಿ
- ಹೆಚ್ಚು ಕಾಯಿಸಿದ ನೀರು ಕುಡಿಯಬೇಕು
- ತಾಜಾ ಆಹಾರದ ಸೇವನೆ
- ಜೇನುತುಪ್ಪು ಸೇವಿಸೋದ್ರಿಂದ ದೇಹದ ಉಷ್ಣತೆ ಕಾಪಾಡುತ್ತೆ
- ಬೆಚ್ಚನೆಯ ಉಡುಪು ಧರಿಸಿ ಹಾಗೂ ಮೈ ಕೈ ಬೆಚ್ಚಗಿಟ್ಟುಕೊಳ್ಳಿ
- ಏನು ಮಾಡಬಾರದು..?
- ಫ್ರಿಡ್ಜ್ನಲ್ಲಿ ಶೇಖರಿಸಿದ ಆಹಾರವನ್ನು ತಿನ್ನಬಾರದು.
- ಅತಿಯಾದ ಮಸಾಲ ಪದಾರ್ಥಗಳು, ಕರಿದ ತಿನಿಸುಗಳನ್ನು ಸೇವಿಸುವುದನ್ನು ನಿಯಂತ್ರಿಸಬೇಕು
- ಜ್ವರ ಕುರಿತು ಭಯ ಬೇಡ ಕಾಳಜಿ ಇರಲಿ..