ಬೆಂಗಳೂರು:ಡಿ.ಜೆ.ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಯಾಗಿದ್ದು, ಇಂದು ನಡೆಯಬೇಕಿದ್ದ ಮದುವೆಗೆ ಅಡ್ಡಿಯಾಗಿದ್ದರಿಂದ ಅನುಮತಿ ಕೋರಿ ವಧು, ವರರು ಠಾಣೆಗೆ ಆಗಮಿಸಿದ್ದರು.
ಡಿ.ಜೆ.ಹಳ್ಳಿ ಗಲಭೆಯಿಂದ ನಿಂತ ಶಾದಿ: ಅನುಮತಿ ಕೋರಿ ಠಾಣೆಗೆ ಬಂದ ವಧು-ವರ
ಡಿ.ಜೆ. ಹಳ್ಳಿ ಗಲಭೆಯಿಂದ ನಿಂತಿದ್ದ ಮದುವೆಗೆ ಅನುಮತಿ ಕೋರಿ ವಧು, ವರರು ಠಾಣೆ ಮೆಟ್ಟಿಲೇರಿದ ಘಟನೆ ನಗರದಲ್ಲಿ ನಡೆದಿದೆ.
ಹಲವು ದಿನಗಳ ಹಿಂದೆ ಗೋರಿಪಾಳ್ಯದ ಶಾದಿ ಮಹಲ್ವೊಂದರಲ್ಲಿ ವಧು ವಾಸಿಯಾ ಪರ್ವೀನಾ, ವರ ಸೈಯದ್ ಅಜರುದ್ದೀನ್ ಎಂಬುವರಿಗೆ ಮನೆಯವರು ಮದುವೆ ನಿಶ್ಚಯಿಸಿದ್ದರು. ನಿಷೇಧಾಜ್ಞೆ ತೆರವಾಗುವ ನಿರೀಕ್ಷೆಯೊಂದಿಗೆ ಮದುವೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದರು.
ಆದ್ರೆ 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಜನರಿಗೆ ಓಡಾಡಲು ಬಿಡುತ್ತಿರಲಿಲ್ಲ. ಈ ಸಲುವಾಗಿ ಮದುವೆ ಮಾಡಿಕೊಳ್ಳಲು ಅನುಮತಿ ಕೋರಿ ವಧು-ವರರು ಠಾಣೆ ಮೆಟ್ಟಿಲೇರಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಇನ್‌ಸ್ಪೆಕ್ಟರ್ ಕೇಶವಮೂರ್ತಿ ವಿವಾಹಕ್ಕೆ ಅನುಮತಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟರು.