ಕರ್ನಾಟಕ

karnataka

ETV Bharat / city

ಕೆ.ಆರ್​.ಪುರ ವಾರ್ಡ್​ನಲ್ಲಿ 3 ಸಾವಿರ ಬಡವರಿಗೆ ರೇಷನ್ ಕಿಟ್ ವಿತರಣೆ

ಬೆಂಗಳೂರಿನ ಕೆ.ಆರ್​. ಪುರ ವಾರ್ಡ್​ನಲ್ಲಿ ಮೂರು ಸಾವಿರ ಬಡವರಿಗೆ ರೇಷನ್ ಕಿಟ್ ಹಾಗೂ ತರಕಾರಿ ಕಿಟ್​ಗಳನ್ನ ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ಬೈರತಿ ಬಸವರಾಜ್ ಚಾಲನೆ ನೀಡಿದರು.

Distribution of ration kit for three thousand poor in KR Pura Ward
ಕೆ.ಆರ್​.ಪುರ ವಾರ್ಡ್​ನಲ್ಲಿ 3 ಸಾವಿರ ಬಡವರಿಗೆ ರೇಷನ್ ಕಿಟ್ ವಿತರಣೆ

By

Published : Jun 7, 2020, 5:26 PM IST

ಬೆಂಗಳೂರು:ಕೆ.ಆರ್​. ಪುರ ವಾರ್ಡ್​ನಲ್ಲಿ ಮೂರು ಸಾವಿರ ಬಡವರಿಗೆ ಬಿಬಿಎಂಪಿ ನಾಮ ನಿರ್ದೇಶಿತ ಮಾಜಿ ಸದಸ್ಯ ಪಿ.ಜೆ. ಆಂತೋಣಿಸ್ವಾಮಿ ಅವರು ರೇಷನ್ ಕಿಟ್ ಹಾಗೂ ತರಕಾರಿ ಕಿಟ್​ಗಳನ್ನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆಂತೋಣಿಸ್ವಾಮಿ ಲಾಕ್​ಡೌನ್ ಸಂದರ್ಭದಲ್ಲಿ ಯುವಕರ ತಂಡವನ್ನ ರಚನೆ ಮಾಡಿಕೊಂಡು ಪ್ರತಿನಿತ್ಯ ಬಡವರಿಗೆ, ನಿರ್ಗತಿಕರಿಗೆ, ವಲಸೆ ಕಾರ್ಮಿಕರಿಗೆ ಊಟ ತಲುಪಿಸುವ ಕೆಲಸ ಮಾಡಿತ್ತಿದ್ದಾರೆ. ಇದೀಗ ಲಾಕ್​ಡೌನ್​ ಸಡಿಲಿಕೆ ಆಗಿದ್ದರೂ ಸಹ ಜನ-ಜೀವನ ಸಹಜ ಸ್ಥಿತಿಗೆ ತಲುಪಲು ಸಮಯ ಹಿಡಿಯುವುದರಿಂದ ಅಲ್ಲಿಯವರೆಗೂ ಬಡವರು ಹಸಿವಿನಿಂದ ಇರಬಾರದೆಂದು ಸಚಿವ ಬೈರತಿ ಬಸವರಾಜ್​ ಅವರು ಸೂಚಿಸಿದ್ದಾರೆ. ಅವರ ಸೂಚನೆ ಮೇರೆಗೆ ಅಗತ್ಯ ವಸ್ತುಗಳ ಕಿಟ್​ ವಿತರಿಸಲಾಗುತ್ತಿದೆ.

ರೇಷನ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಬೈರತಿ ಬಸವರಾಜ್, ಆಂತೋಣಿಸ್ವಾಮಿ ಹಾಗೂ ಅವರ ತಂಡ ಲಾಕ್​ಡೌನ್ ಸಂದರ್ಭದಲ್ಲಿ ಬಡವರ ಪರವಾಗಿ ನಿಂತು ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಕ್ಷೇತ್ರದಲ್ಲಿನ ಬಡವರು ಹಸಿವಿನಿಂದ ಬಳಲಬಾರದೆಂದು ಪ್ರತಿಯೊಂದು ವಾರ್ಡ್​ನಲ್ಲೂ ರೇಷನ್ ಕಿಟ್ ನೀಡಲಾಗುತ್ತಿದೆ ಎಂದರು.

ಪಿ.ಜೆ. ಆಂತೋಣಿಸ್ವಾಮಿ ಮಾತನಾಡಿ, ಲಾಕ್​ಡೌನ್ ಆದಾಗಿನಿಂದಲೂ ಬಡವರ ಪರ ಕೆಲಸ ಮಾಡಿಕೊಂಡು ಬಂದಿದ್ದು, ಅಕ್ಕಿ, ಎಣ್ಣೆ, ಉಪ್ಪು, ಮಸಾಲ ಪದಾರ್ಥಗಳು, ತರಕಾರಿ ಸೇರಿದಂತೆ ಅಗತ್ಯ ಕಿಟ್​ಗಳನ್ನು ಇಂದು ನೀಡಿದ್ದೇವೆ ಎಂದರು.

ABOUT THE AUTHOR

...view details