ಕರ್ನಾಟಕ

karnataka

ETV Bharat / city

ಬಿಎಸ್​ವೈ ಪುತ್ರ ವಿಜಯೇಂದ್ರರನ್ನ ಭೇಟಿ ಮಾಡಿದ ಅನರ್ಹ ಶಾಸಕರು! - ಸಿಎಂ ಬಿಎಸ್ ಯಡಿಯೂರಪ್ಪ

ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಸೋಮವಾರ ಅನರ್ಹ ಶಾಸಕರು ಭೇಟಿ ಮಾಡಿ ಚರ್ಚಿಸಿದರು. ಸಿಎಂ ಬಿಎಸ್​ವೈ ಸೂಚನೆಯಂತೆ ಅನರ್ಹರನ್ನ ವಿಜಯೇಂದ್ರ ಭೇಟಿಯಾಗಿದ್ದರು. ಇವರಿಗೆ ಭರವಸೆ ನೀಡುವಂತೆ ಬಿಎಸ್​ವೈ ಸೂಚಿಸಿದ್ದಾರೆ ಎನ್ನಲಾಗ್ತಿದೆ.

ವಿಜಯೇಂದ್ರ ರನ್ನ ಭೇಟಿಮಾಡಿದ ಅತೃಪ್ತ ಶಾಸಕರು

By

Published : Aug 5, 2019, 11:35 PM IST

Updated : Aug 5, 2019, 11:54 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ​ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ವಿಜಯೇಂದ್ರ ಅವರನ್ನು ಸೋಮವಾರ ಅನರ್ಹಗೊಂಡಿರುವ ಶಾಸಕರು ಭೇಟಿ ಮಾಡಿ ಚರ್ಚಿಸಿದರು.

ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್​ನಲ್ಲಿ ವಿಜಯೇಂದ್ರರನ್ನು ಅನರ್ಹ ಶಾಸಕರು ಭೇಟಿ ಮಾಡಿದ್ದರು. ಆರ್. ಆರ್. ನಗರ ಅನರ್ಹ ಶಾಸಕ ಮುನಿರತ್ನಂ, ಶಿವಾಜಿನಗರದ ರೋಷನ್ ಬೇಗ್ ಮಾತುಕತೆ ನಡೆಸಿದ ಪ್ರಮುಖರು. ಅರ್ಧ ಗಂಟೆಗೂ ಹೆಚ್ಚು ಕಾಲ ಇವರು ಮಾತುಕತೆ ನಡೆಸಿದ್ರು.

ವಿಜಯೇಂದ್ರ ರನ್ನ ಭೇಟಿಮಾಡಿದ ಅತೃಪ್ತ ಶಾಸಕರು

ಇದೇ ಸಂದರ್ಭ ನಾಯಕರು ಸುಪ್ರೀಂಕೋರ್ಟ್ ವಿಚಾರಣೆಯ ಬಗ್ಗೆ ಮಾತುಕತೆ ನಡೆಸಿದರು, ಎನ್ನಲಾಗ್ತಿದ್ದು, ಇಬ್ಬರಿಗೂ ಭೇಟಿ ವೇಳೆ ವಿಜಯೇಂದ್ರ ಭರವಸೆ ನೀಡಿದ್ದಾರೆ. ಮಾತುಕೊಟ್ಟಂತೆ ನಾವು ನಡೆದುಕೊಳ್ತೇವೆ. ನೀವು ನಿಶ್ಚಿಂತೆಯಿಂದ ಕ್ಷೇತ್ರದ ಕಡೆ ಗಮನಹರಿಸಿ. ಶೀಘ್ರದಲ್ಲೇ ಎಲ್ಲಾ ಸಮಸ್ಯೆ ಬಗೆಹರಿಯಲಿವೆ ಎಂದು ತಮ್ಮನ್ನು ಭೇಟಿ ಮಾಡಿದ ಅನರ್ಹರಿಗೆ ವಿಜಯೇಂದ್ರ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಸಿಎಂ ಬಿಎಸ್​ವೈ ಸೂಚನೆಯಂತೆ ಅನರ್ಹರನ್ನ ವಿಜಯೇಂದ್ರ ಭೇಟಿಯಾಗಿದ್ದರು. ಇವರಿಗೆ ಭರವಸೆ ನೀಡುವಂತೆ ಬಿಎಸ್​ವೈ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.

Last Updated : Aug 5, 2019, 11:54 PM IST

ABOUT THE AUTHOR

...view details