ಕರ್ನಾಟಕ

karnataka

ETV Bharat / city

ಸರ್ಕಾರದಿಂದ ಬಜೆಟ್ ಅನುದಾನ ಕಡಿತ : ಕಾರ್ಪೋರೇಟರ್​ಗಳ ಮಾತಿನ ಸಮರ - Council

ಬಜೆಟ್ ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ನಡೆಯ ವಿರುದ್ಧ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್​-ಬಿಜೆಪಿ ಪಕ್ಷದ ಕಾರ್ಪೋರೇಟರ್​ಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್ಸ್ ಮಾತಿನ ಸಮರ

By

Published : Sep 1, 2019, 3:01 AM IST

ಬೆಂಗಳೂರು: ಕಾಂಗ್ರೆಸ್ ಪಾಲಿಕೆ ಸದಸ್ಯರ 564 ಕೋಟಿ ರೂ. ಅನುದಾನ ಕಡಿತಗೊಳಿಸಿರುವ ರಾಜ್ಯ ಸರ್ಕಾರದ ನಡೆಯ ವಿರುದ್ಧ ಶನಿವಾರ ನಡೆದ ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್​ಗಳು ಮಾತಿನ ಸಮರ ನಡೆಸಿದರು.

ಉಪಮೇಯರ್ ಭದ್ರೇಗೌಡ ಮಾತನಾಡಿ, 14 ನೇ ಹಣಕಾಸು ಆಯೋಗದಡಿ ಮೀಸಲಿಟ್ಟಿದ್ದ 10 ಕೋಟಿ ರೂ ಅನುದಾನದಲ್ಲಿ 5 ಕೋಟಿ ರೂ. ಕಡಿತ ಮಾಡಲಾಗಿದೆ. ಹಾಗೂ ಉಪಮೇಯರ್ ವಿವೇಚನೆಗೆ ಬಿಟ್ಟಿದ್ದ 5 ಕೋಟಿ ರೂ. ಅನುದಾನದಲ್ಲಿ ಮೂರು ಕೋಟಿ ರೂ. ಕಡಿತ ಮಾಡಲಾಗಿದ್ದು, ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ. ಅಲ್ಲದೆ ಮಹಾಲಕ್ಷ್ಮಿ ಲೇಔಟ್​​ನಲ್ಲಿ ಸದ್ಯ ಶಾಸಕರು ಇಲ್ಲದಿದ್ದರೂ 20 ಕೋಟಿ ಕೊಟ್ಟಿದಾರೆ ಎಂದು ಆರೋಪಿಸಿದರು.

ಪಾಲಿಕೆ ಸಭೆಯಲ್ಲಿ ಕಾರ್ಪೋರೇಟರ್ಸ್ ಮಾತಿನ ಸಮರ

ಈ ವೇಳೆ ಕಾರ್ಪೋರೇಟರ್ ಹೇಮಲತಾ ಗೋಪಾಲಯ್ಯ ಮಾತನಾಡಿ, 20 ಕೋಟಿ ರೂ. ಅನುದಾನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಇಟ್ಟಿಲ್ಲ. ಮಹಾಲಕ್ಷ್ಮೀ ಲೇಔಟ್​​ನಲ್ಲಿ 7 ವಾರ್ಡ್​ಗಳಿವೆ ಎಂದು ತಿರುಗೇಟು ನೀಡಿದರು.

ಬಜೆಟ್ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡ ಬಿಜೆಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬಿಬಿಎಂಪಿಯಲ್ಲಿ 102 ಜನ ಬಿಜೆಪಿ ಸದಸ್ಯರಿದ್ದೇವೆ. ಕಾಂಗ್ರೆಸ್ ಪಾಲಿಕೆ ಸದಸ್ಯರು 75 ಜನ, ಜೆಡಿಎಸ್​​ನಲ್ಲಿ 14 ಜನ ಇದ್ದಾರೆ. ನಮಗಿಂತ ಹೆಚ್ಚು ಅನುದಾನ ಅವರಿಗೇ ನೀಡಲಾಗಿದೆ. ಹೆಚ್ಚುವರಿ ಅನುದಾನ 3 ಲಕ್ಷ ರೂ. ಸಹ ಅವರಿಗೇ ನೀಡಲಾಗಿದೆ ಎಂದರು.

ABOUT THE AUTHOR

...view details