ಕರ್ನಾಟಕ

karnataka

ETV Bharat / city

ವಿಪತ್ತು ನಿರ್ವಹಣಾ ಯೋಜನೆಯನ್ನು ಕಂದಾಯ ಇಲಾಖೆ ರೂಪಿಸುವಂತಿಲ್ಲ : ಹೈಕೋರ್ಟ್

ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 23ರ ಪ್ರಕಾರ ಯೋಜನೆಯನ್ನು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಕಾರ್ಯಾಕಾರಿ ಸಮಿತಿಯೇ ಸಿದ್ಧಪಡಿಸಬೇಕು. ಈ ಕೆಲಸವನ್ನು ಕಂದಾಯ ಸೇರಿ ಬೇರೆ ಯಾವುದೇ ಇಲಾಖೆಗೆ ಹಸ್ತಾಂತರಿಸಲು ಬರುವುದಿಲ್ಲ..

Department of Revenue
ಹೈಕೋರ್ಟ್ ಅಭಿಪ್ರಾಯ

By

Published : Mar 19, 2021, 3:58 PM IST

ಬೆಂಗಳೂರು :ವಿಪತ್ತು ನಿರ್ವಹಣಾ ಯೋಜನೆಯನ್ನು ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯೇ ಸಿದ್ದಪಡಿಸಬೇಕೇ ಹೊರತು ಕಂದಾಯ ಇಲಾಖೆಯಲ್ಲ ಎಂದು ಹೈಕೋರ್ಟ್ ಹೇಳಿದೆ.

ಓದಿ: ಕಲಾಪದಲ್ಲಿ ಬಟ್ಟೆ ವಿಚಾರವಾಗಿ ಹಾಸ್ಯದ ಹೊಳೆ..ಸಿದ್ದರಾಮಯ್ಯ 90 ಸೆಟ್​ ಉಡುಪಿನ ರಹಸ್ಯ ಗೊತ್ತೇ!?

ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಕೋರಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ತುಮಕೂರಿನ ಮಲ್ಲಿಕಾರ್ಜುನ ಎಂಬ ವ್ಯಕ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, 2020-21ನೇ ಸಾಲಿನ ವಿಪತ್ತು ನಿರ್ವಹಣಾ ಯೋಜನೆಯನ್ನು ಕಂದಾಯ ಇಲಾಖೆ ರೂಪಿಸಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಪೀಠ, ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 23ರ ಪ್ರಕಾರ ಯೋಜನೆಯನ್ನು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಕಾರ್ಯಾಕಾರಿ ಸಮಿತಿಯೇ ಸಿದ್ಧಪಡಿಸಬೇಕು. ಈ ಕೆಲಸವನ್ನು ಕಂದಾಯಸೇರಿಬೇರೆ ಯಾವುದೇ ಇಲಾಖೆಗೆ ಹಸ್ತಾಂತರಿಸಲು ಬರುವುದಿಲ್ಲ ಎಂದಿತು.

ಅಲ್ಲದೇ, ನಿಯಮಗಳ ಪ್ರಕಾರ ಈ ಯೋಜನೆಯನ್ನು ಪುರಸ್ಕರಿಸುವುದು ಸರಿಯಲ್ಲ. ಹೀಗಾಗಿ, ಯೋಜನೆಯನ್ನು ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಪರಿಶೀಲಿಸಿ ನವೀಕರಿಸುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಸ್ಪಷ್ಟಪಡಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details