ಕರ್ನಾಟಕ

karnataka

ETV Bharat / city

ಪ್ರೇಮಿಗಳ ದಿನಕ್ಕೆ ಕ್ಷಣಗಣನೆ.. ಪ್ರೇಮದ ಸಂಕೇತ ರೆಡ್ ರೋಸ್​ಗೆ ಹೆಚ್ಚಿದ ಬೇಡಿಕೆ.. - demand for rose

ಬೆಂಗಳೂರಿನಿಂದ ವಿವಿಧ ದೇಶಕ್ಕೆ ರಫ್ತಾಗುತ್ತಿದ್ದ ಹೂ ವಹಿವಾಟಿನ ಮೇಲೆ ಕೊರೊನಾ ಕೊಂಚ ಮಟ್ಟಿನ ಪರಿಣಾಮ ಬೀರಿದೆ. ಕೊರೊನಾ ಅಂತಾ ವಿಮಾನ ದರ ಶೇ.30ರಷ್ಟು ಜಾಸ್ತಿಯಾಗಿದೆ. ಪ್ರತಿ ವರ್ಷ 40-50 ಲಕ್ಷ ಗುಲಾಬಿ ರಫ್ತಾಗುತ್ತಿತ್ತು. ಆದ್ರೆ, ಈ ವರ್ಷ ಸುಮಾರು 15-16 ಲಕ್ಷ ಗುಲಾಬಿ ರಫ್ತಾದರೆ ಹೆಚ್ಚು ಎನ್ನುವಂತಾಗಿದೆ..

demand for red rose
ಗುಲಾಬಿಗೆ ಹೆಚ್ಚಿದ ಬೇಡಿಕೆ

By

Published : Feb 13, 2022, 3:22 PM IST

ಬೆಂಗಳೂರು: ಫೆಬ್ರವರಿ ತಿಂಗಳೆಂದರೆ ಪ್ರೇಮಿಗಳಿಗೆ ಬಹಳಾನೇ ಅಚ್ಚುಮೆಚ್ಚು. ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಬೇಕು ಅಂತಾ ಇರೋವವರು, ಈಗಾಗಲೇ ಪ್ರೀತಿಯಲ್ಲಿ ಇರುವವರು ಫೆಬ್ರವರಿ 14ಕ್ಕೆ ಕಾಯುತ್ತಿರುತ್ತಾರೆ.

ಪ್ರೇಮಿಗಳ ದಿನಕ್ಕಾಗಿಯೇ ಕಾದು ಸಂಭ್ರಮಿಸುವ ಸಾಕಷ್ಟು ಜೋಡಿಗಳಿವೆ. ಈ ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರೇಮದ ಸಂಕೇತ ರೆಡ್ ರೋಸ್​ಗೆ ಬೇಡಿಕೆ ಹೆಚ್ಚಾಗಿದೆ.‌

ಇಲ್ಲಿ ಬೆಳೆದ ರೋಸ್​ಗೆ ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೇ ದೇಶ-ವಿದೇಶಗಳಿಂದಲೂ ಸಖತ್​​ ಡಿಮ್ಯಾಂಡ್ ಇದೆ. ಅದರಲ್ಲೂ ಕೆಂಪು, ಬಿಳಿ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಬೆಂಗಳೂರು ಗುಲಾಬಿಯು ಬೆಂಗಳೂರು ಅಷ್ಟೇ ಅಲ್ಲದೇ ದೇಶ-ವಿದೇಶದಲ್ಲಿನ ಪ್ರೇಮಿಗಳನ್ನೂ ಹತ್ತಿರಕ್ಕೆ ಸೇರಿಸಲು ಹೊರಟಿದೆ.‌

ಪ್ರೇಮದ ಸಂಕೇತ ರೆಡ್ ರೋಸ್​ಗೆ ಹೆಚ್ಚಿದ ಬೇಡಿಕೆ..

ಕಳೆದ ವರ್ಷ ಕೊರೊನಾ ಎಫೆಕ್ಟ್​ನಿಂದಾಗಿ ರೋಸ್​ಗೆ ಬೇಡಿಕೆ ಕಡಿಮೆಯಿತ್ತು. ಆದ್ರೆ, ಈ ಬಾರಿ ರಾಜಧಾನಿ ಸೇರಿದಂತೆ ಇಡೀ ದೇಶದಲ್ಲಿ ರೋಸ್​ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ.

ಆದ್ರೆ, ಈ ಬಾರಿ ಮಳೆ ಹಾಗೂ ಕೊರೊನಾ ಹೊಡೆತ ಆಗಬಹುದು ಅಂತಾ ಬಹುತೇಕ ರೈತರು ರೆಡ್ ರೋಸ್ ಬೆಳೆಯದಿರುವುದರಿಂದ ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಪ್ಪ ಹರಾಜು ಕೇಂದ್ರಕ್ಕೆ ಗುಲಾಬಿಗಳನ್ನು ಹೊತ್ತು ತರುವ ರೈತರ ಸಂಖ್ಯೆ ಇಳಿಕೆಯಾಗಿದೆ. ಹೀಗಾಗಿ, ಕಳೆದ ವರ್ಷ ಒಂದು ರೋಸ್​ಗೆ 6 ರೂಪಾಯಿ ಇದ್ರೆ, ಈ ಬಾರಿ 7 ರಿಂದ 8 ರೂಪಾಯಿವರೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:ಕೊಪ್ಪಳ: ತುಂಗಭದ್ರಾ ನದಿ ತೀರದಲ್ಲೀಗ ದೇಶ-ವಿದೇಶದ ಬಾನಾಡಿಗಳದ್ದೇ ಕಲರವ

ಬೆಂಗಳೂರಿನಿಂದ ವಿವಿಧ ದೇಶಕ್ಕೆ ರಫ್ತಾಗುತ್ತಿದ್ದ ಹೂ ವಹಿವಾಟಿನ ಮೇಲೆ ಕೊರೊನಾ ಕೊಂಚ ಮಟ್ಟಿನ ಪರಿಣಾಮ ಬೀರಿದೆ. ಕೊರೊನಾ ಅಂತಾ ವಿಮಾನ ದರ ಶೇ.30ರಷ್ಟು ಜಾಸ್ತಿಯಾಗಿದೆ. ಪ್ರತಿ ವರ್ಷ 40-50 ಲಕ್ಷ ಗುಲಾಬಿ ರಫ್ತಾಗುತ್ತಿತ್ತು. ಆದ್ರೆ, ಈ ವರ್ಷ ಸುಮಾರು 15-16 ಲಕ್ಷ ಗುಲಾಬಿ ರಫ್ತಾದರೆ ಹೆಚ್ಚು ಎನ್ನುವಂತಾಗಿದೆ.

ಈ ಹಿಂದೆ ಒಂದು ಗುಲಾಬಿ ಹೂವನ್ನು ಹೊರ ದೇಶಕ್ಕೆ ಕಳುಹಿಸಲು 15 ರೂ. ವೆಚ್ಚ ತಗಲುತ್ತಿತ್ತು. ಅದೇ ಇಂದು 35-40 ರೂ. ಇದೆ. ಕೋವಿಡ್​ ಹಿನ್ನೆಲೆ ಕಳೆದ ವರ್ಷ ಸುಮಾರು 10-15 ಲಕ್ಷ ಗುಲಾಬಿ ಹೂಗಳು ಹೊರ ರಾಷ್ಟ್ರಗಳಿಗೆ ರಫ್ತಾಗಿದ್ದವು. ಈ ಬಾರಿ ಶೇ.10ರಷ್ಟು ಹೆಚ್ಚು ಹೂ ರಫ್ತಾಗಲಿದೆ.

ABOUT THE AUTHOR

...view details