ಕರ್ನಾಟಕ

karnataka

ETV Bharat / city

ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ಸದಸ್ಯ ..! - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ

ವಿಧಾನ ಪರಿಷತ್​​ನಲ್ಲಿ ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸಿ ಪೇಚಿಗೆ ಸಿಲುಕಿದರು.

debate-on-the-constitution-in-karnataka-legislative-council
ವಿಧಾನ ಪರಿಷತ್

By

Published : Mar 17, 2020, 5:21 PM IST

ಬೆಂಗಳೂರು:ವಿಧಾನ ಪರಿಷತ್​​ನಲ್ಲಿ ಸಂವಿಧಾನದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸಿ ಪೇಚಿಗೆ ಸಿಲುಕಿದರು.

ಪರಿಷತ್​ನ ಬೆಳಗಿನ ಕಲಾಪದಲ್ಲಿ ಮಾತನಾಡಿದ ರಮೇಶ್, ಸಂವಿಧಾನದ ಕುರಿತು ಮಾತನಾಡುತ್ತಾ ಬ್ರಿಟಿಷರಿಗೆ ಅಭಿನಂದನೆ ಸಲ್ಲಿಸಿದರು. ಆಗ ಬಿಜೆಪಿ ಸದಸ್ಯರ ಟೀಕೆಗೆ ಗುರಿಯಾದರು.

ಇದಕ್ಕೆ ಬಿಜೆಪಿ ಸದಸ್ಯ ಪ್ರಾಣೇಶ್ ತೀವ್ರ ಆಕ್ಷೇಪ‌ ವ್ಯಕ್ತಪಡಿಸಿದರು. ಬ್ರಿಟಿಷರಿಗೆ ಧನ್ಯವಾದ ತಿಳಿಸಿದ್ದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಪ್ರಾಣೇಶ್ ಮಾತಿಗೆ ದನಿಗೂಡಿಸಿದ ಬಿಜೆಪಿ ಸದಸ್ಯರು ಕ್ಷಮೆಗೆ ಪಟ್ಟುಹಿಡಿದರು. ಸಚಿವ ಸಿ.ಟಿ.ರವಿ ಸಹ ವಿರೋಧ ವ್ಯಕ್ತಪಡಿಸಿ, ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ಹೋರಾಟ ಮಾಡಿದ್ದು ವ್ಯರ್ಥವಾಯ್ತು. ಹಾಗಾದ್ರೆ ಪರಿಷತ್​​​ನಲ್ಲಿರುವ ಗಾಂಧೀಜಿ ಪೋಟೊ ತೆಗೆದುಹಾಕಿ ಬ್ರಿಟಿಷರ ಪೋಟೋ ಹಾಕಿ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಹೋರಾಟಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು‌ ಬಿಜೆಪಿ ಸದಸ್ಯರು ರಮೇಶ್ ವಿರುದ್ಧ ಕಿಡಿಕಾರಿದರು. ಇದು ಬ್ರಿಟಿಷರ ಸಂವಿಧಾನದ ಮೇಲಿನ ಚರ್ಚೆಯಲ್ಲ. ಭಾರತದ ಸಂವಿಧಾನದ ಮೇಲಿನ ಚರ್ಚೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ‌ ಸದಸ್ಯರ ಆಗ್ರಹಕ್ಕೆ ಮಣಿಯದ ಪಿ.ಆರ್.ರಮೇಶ್, ಬ್ರಿಟಿಷರು ಈ ಹಿಂದೆ ರಾಜರ ಮಧ್ಯೆ ದ್ವೇಷ ತಂದಿಟ್ಟು ಒಡೆದಾಳುವ ನೀತಿ ಅನುಸರಿಸಿದರು. ಆ ಕಾಲದಲ್ಲಿ ಅವರು ಬಿತ್ತಿದ ವಿಷ ಬೀಜ ಸ್ವಾತಂತ್ರ್ಯ ನಂತರ ನಮಗೆ ಅಮೃತವಾಗಿ ಪರಿಣಮಿಸಿತು. ರಾಜರ ಆಡಳಿತದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದ ರಾಜರು, ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನೂ ಒಂದುಗೂಡುವಂತೆ ಮಾಡಿದರು. ಉತ್ತರ ಮತ್ತು ದಕ್ಷಿಣ ಭಾರತವನ್ನಾಗಿ ಪ್ರತ್ಯೇಕಿಸದೇ ಅಖಂಡ ಭಾರತವನ್ನಾಗಿ ಮಾಡಿದಕ್ಕೆ ಬ್ರಿಟಿಷರಿಗೆ ಧನ್ಯವಾದ ತಿಳಿಸಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆದರು.

ABOUT THE AUTHOR

...view details