ಕರ್ನಾಟಕ

karnataka

ETV Bharat / city

ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ... ಅಧಿಕಾರಿಗಳಿಗೆ ತರಾಟೆ!

ನಾಗರೀಕ ಸೇವಾ ಇಲಾಖೆಗಳಲ್ಲಿ ಸರಿಯಾಗಿ ಪ್ರಮಾಣ ಪತ್ರಗಳನ್ನು ನೀಡದೆ ಕಾಲಹರಣ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ತಪ್ಪಿತಸ್ಥರಿಗೆ ಮೈಚಳಿ ಬಿಡಿಸಿ, ಸೂಕ್ತ ಕ್ರಮ ಕೈಗೊಂಡರು.

ಜಿಲ್ಲಾಧಿಕಾರಿ ದಿಢೀರ್ ಭೇಟಿ

By

Published : Jun 19, 2019, 3:43 AM IST

ಬೆಂಗಳೂರು: ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್,ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ತಹಸೀಲ್ದಾರ್ ಕಚೇರಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೇಟಿ ಸಂದರ್ಭದಲ್ಲಿ ತಹಸೀಲ್ದಾರ್ ರಾಮ್ ಲಕ್ಷ್ಮಣ್ ಸೇರಿದಂತೆ ಅಧಿಕಾರಿಗಳು ಗೈರಾಗಿದ್ದು ಕಂಡು ಬಂದಿದ್ದು, ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೆ ತರದೆ ನಾಲ್ಕು ದಿನ ರಜೆ ಮೇಲಿದ್ದ ಗ್ರೇಡ್-2 ತಹಸೀಲ್ದಾರ್ ಶಾರದಮ್ಮನನ್ನು ಅಮಾನತು ಮಾಡಿದರು.

ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ನಂತರ ಕೆಆರ್ ಪುರಂನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿದೆಯೋ ಇಲ್ಲವೋ ಎಂದು ವಿಚಾರಿಸಿದರು. ಆಸ್ಪತ್ರೆ ಭೇಟಿ ವೇಳೆ ಔಷಧಾಲಯದಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ಸೀಜ್ ಮಾಡಿ, ಫಾರ್ಮಸಿಸ್ಟ್​​ಗಳಾದ ಶಕೀಲಾ, ವನಜಾಕ್ಷಿ ಹಾಗೂ ಪ್ರಿಯದರ್ಶಿನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಆಸ್ಪತ್ರೆಯಲ್ಲಿನ ಅವಧಿ ಮೀರಿದ ಔಷಧಿಗಳ ದಾಸ್ತಾನಿನ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಫಾರ್ಮಸಿಸ್ಟ್​ಗಳ ಬೇಜವಾಬ್ದಾರಿಯಿಂದ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿ ಊಟದಲ್ಲಿನ ಶುಚಿತ್ವವನ್ನು ಪರಿಶೀಲಿಸಿದರು.

ನಾಗರೀಕ ಸೇವಾ ಇಲಾಖೆಗಳಲ್ಲಿ ಸರಿಯಾಗಿ ಪ್ರಮಾಣಪತ್ರಗಳನ್ನು ನೀಡದೆ ಕಾಲಹರಣ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಸುಮಾರು ದಿನಗಳಿಂದ ಸಾರ್ವಜನಿಕರಿಂದದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ತಪ್ಪಿತಸ್ಥರಿಗೆ ಮೈಚಳಿ ಬಿಡಿಸಿ, ಸೂಕ್ತ ಕ್ರಮ ಕೈಗೊಂಡರು.

ABOUT THE AUTHOR

...view details