ಬೆಂಗಳೂರು: ಡ್ರಗ್ಸ್ ಸೇವನೆಗೆ ಅಡ್ಡಿಯಾದ ಅಪ್ಪನನ್ನೇ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ.
ಡ್ರಗ್ಸ್ ಸೇವಿಸಬೇಡ ಎಂದ ಅಪ್ಪನಿಗೆ ಮಧ್ಯೆರಾತ್ರಿ ಕೊಳ್ಳಿ ಇಟ್ಟಳಾ ಪುತ್ರಿ?! - daughter killed the father?
ಮಾದಕ ವ್ಯಸನ ಎಷ್ಟು ಕೆಟ್ಟದ್ದು ಎಂಬುದಕ್ಕೆ ನೈಜ ಉದಾಹರಣೆ ಬೆಂಗಳೂರಿನಲ್ಲಿ ನಡೆದ ಈ ಘಟನೆ. ಡ್ರಗ್ಸ್ ಸೇವನೆಗೆ ತಂದೆ ಅಡ್ಡಿಪಡಿಸಿದ್ದಕ್ಕೆ ಮಗಳೇ ಅಪ್ಪನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಪ್ರಕರಣ ಬೆಂಗಳೂರಲ್ಲಿ ನಡೆದಿದೆ.
ರಾಜಾಜಿನಗರದ ಭಾಷ್ಯಂ ಸರ್ಕಲ್ನ 5ನೇ ಬ್ಲಾಕ್ನ ಮನೆಯೊಂದರಲ್ಲಿ ಉದ್ಯಮಿ ಜಯಕುಮಾರ್ (41) ಎಂಬುವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಜಯಕುಮಾರ್ ಮಗಳು ಬೆಂಕಿ ತಾಗಿದ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಬಟ್ಟೆ ಅಂಗಡಿ ಮಾಲೀಕರಾಗಿದ್ದ ಜಯಕುಮಾರ್, ನಿನ್ನೆ ರಾತ್ರಿ ತಮ್ಮ ಮಗಳು ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡು ಅಡ್ಡಿಪಡಿಸಿದ್ದರು ಎನ್ನಲಾಗ್ತಿದೆ. ತಾನು ಡ್ರಗ್ಸ್ ಸೇವಿಸೋದನ್ನ ತಡೆದಿದ್ದಕ್ಕೆ ಅಪ್ಪನ ವಿರುದ್ಧವೇ ಕೋಪಗೊಂಡಿದ್ದಳೆನ್ನಲಾದ ಪುತ್ರಿಯು ಅಪ್ಪ ಜಯಕುಮಾರ್ ಮಲಗಿದ್ದಾಗ ಬೆಂಕಿ ಹಚ್ಚಿದ್ದಾಳೆ ಎಂದು ಶಂಕಿಸಲಾಗಿದೆ.
ಜಯಕುಮಾರ್ ಪತ್ನಿ ಖಾಸಗಿ ಕೆಲಸದ ನಿಮಿತ್ತ ಪಾಂಡಿಚೇರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.