ಕರ್ನಾಟಕ

karnataka

ETV Bharat / city

'ಕುವೆಂಪು ರಾಮನನ್ನು ಹೀರೋ ಮಾಡಿದ್ರು, ಪೆರಿಯಾರ್ ರಾವಣನ ಹೀರೋ ಮಾಡಲು ಹೊರಟಿದ್ರು' - ರೋಹಿತ್​ ಚಕ್ರತೀರ್ಥ

ಯಲಹಂಕದ ಖಾಸಗಿ ರೆಸಾರ್ಟ್​ನಲ್ಲಿ ನಡೆಯುತ್ತಿರುವ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದಲ್ಲಿ ಭಾಗವಹಿಸಿದ ಸಿ.ಟಿ.ರವಿ, ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದರು.

BJP national general secretary CT Ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

By

Published : Jun 19, 2022, 9:00 AM IST

Updated : Jun 19, 2022, 1:28 PM IST

ಯಲಹಂಕ: ಕುವೆಂಪು ಅವರು ರಾಮನನ್ನು ಹೀರೋ ಮಾಡಿದ್ರು, ಪೆರಿಯಾರ್ ರಾವಣನನ್ನು ಹೀರೋ ಮಾಡಲು ಹೊರಟಿದ್ರು. ಬರಗೂರು ಸಮಿತಿ ಕುವೆಂಪು ಬಿಟ್ಟು ಪೆರಿಯಾರ್ ಪಾಠ ಸೇರಿಸಿದ್ದು, ನಾವು ಹೆಚ್ಚುವರಿಯಾಗಿ ಕುವೆಂಪು ಪಾಠಗಳನ್ನು ಸೇರಿಸಿದ್ದೇವೆ ಎಂದು ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸಿಕೊಂಡರು.

ಹೋರಾಟ ಮಾಡುವುದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ನೀವು ಯಾವ ವಿಚಾರವಾಗಿ ಹೋರಾಟ ಮಾಡ್ತಿದ್ದೀರಿ ಎಂಬ ಅರಿವಿರಬೇಕು. ಬರಗೂರು ಸಮಿತಿ ಕುವೆಂಪು ಅವರ ರಾಮಾಯಣ ದರ್ಶನಂ ಬಿಟ್ಟು ಪೆರಿಯಾರ್ ಪಠ್ಯ ನೀಡಲು ಹೊರಟಿದ್ದರು. ಕುವೆಂಪು ಅವರು ರಾಮನನ್ನು ಹೀರೋ ಮಾಡಿದ್ರೆ, ಪೆರಿಯಾರ್ ರಾವಣನನ್ನು ಹೀರೋ ಮಾಡಲು ಹೊರಟಿದ್ದರು. ಕುವೆಂಪು ಅವರ ಪಾಠವನ್ನೇ ಕೈಬಿಡಲು ಹೊರಟಿದ್ದವರು ಬರಗೂರು ಸಮಿತಿ. ನಾವು ರಾವಣನನ್ನು ಹೀರೋ ಮಾಡಿರೋ ಪಠ್ಯ ಓದಬೇಕಾ ಎಂದು ಕೇಳಿದರು.

ನಾವು ಕುವೆಂಪು ಅವರ ಪಠ್ಯಕ್ಕೆ ಹೆಚ್ಚುವರಿಯಾಗಿ ಎರಡು ಪಠ್ಯವನ್ನು ಸೇರಿಸಿದ್ದೇವೆ. ಎರಡು ಪ್ಯಾರಾ ಹೆಚ್ಚುವರಿ ಸೇರಿಸಿರೋದು ತಪ್ಪಾ? ನಾರಾಯಣ ಗುರು ಅವರ ಪಠ್ಯ ಕೈಬಿಟ್ಟಿಲ್ಲ, ಬಸವಣ್ಣನವರ ಪಾಠವೂ ಇದೆ ಎಂದರು.


ಸಿಎಂ ಮತ್ತೊಂದು ಆಪ್ಷನ್ ಕೊಟ್ಟಿದ್ದಾರೆ. ಮುಡಂಬಡಿತ್ತಾಯ, ಬರಗೂರು ರಾಮಚಂದ್ರಪ್ಪ ಹಾಗೂ ರೋಹಿತ್ ಚಕ್ರತೀರ್ಥ ಅವರ ಮೂರು ಪಾಠವನ್ನು ಪಬ್ಲಿಕ್ ಡೊಮೈನ್‌ಗೆ ಬಿಟ್ಟಿದ್ದಾರೆ. ಜನರು ಓದಿ ಯಾವುದು ಬೇಕು ಅಂತ ತೀರ್ಮಾನಿಸಲಿ. ಪಠ್ಯ ಬದಲಿಸಿ ಅಂದ್ರೆ ಬದಲಿಸಲು ಸಿದ್ದ ಅಂತ ತಿಳಿಸಿದ್ದೇವೆ. ದೇವೇಗೌಡರು, ಡಿ.ಕೆ ಶಿವಕುಮಾರ್ ಎಲ್ಲರೂ ಪೂಜೆ ಮಾಡೋದು ರಾಮನನ್ನೇ. ರಾವಣನನ್ನು ಹೀರೋ ಮಾಡಲು ಹೊರಟ್ರೆ ನಾವು ಏನು ಮಾಡೋದು?. ಅದನ್ನು ಅಲ್ಲಿ ಹೋರಾಟ ಮಾಡುತ್ತಿರುವವರಿಗೆ ಮನವರಿಕೆ ಮಾಡಬೇಕಿದೆ ಎಂದು ಹೇಳಿದರು.

ಅಗ್ನಿಪಥ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿ, ಅಗ್ನಿಪಥ ಯೋಜನೆಯನ್ನು ಮೂರೂ ಸೇನೆಯ ದಂಡನಾಯಕರು ಸೇರಿ ತೀರ್ಮಾನಿಸಿದ್ದಾರೆ. ಇಸ್ರೇಲ್, ಸ್ವಿಟ್ಜರ್ಲೆಂಡ್‌‌, ರಷ್ಯಾ, ಅಮೆರಿಕಗಳಲ್ಲಿ ಯುವಕರನ್ನು ಸೇನೆಗೆ ಭರ್ತಿ‌ಮಾಡಿಕೊಳ್ಳುವ ಅವಕಾಶ ಇದೆ. ಎಂಟು, ಹತ್ತು ದೇಶಗಳು ಶಿಕ್ಷಣದ ಜತೆಗೆ ಸೇನೆಗೂ ತರಬೇತಿ ಕೊಡುತ್ತಿವೆ. ಇದರಿಂದ ಅವರ ಕಾರ್ಯಕ್ಷಮತೆ ಹೆಚ್ಚುತ್ತದೆ. ಸೇವೆಯ ನಾಲ್ಕು ವರ್ಷದ ನಂತರ ಪ್ಯಾಕೇಜ್ ಸಿಗುತ್ತೆ. ನಿವೃತ್ತರಾದವರಿಗೆ ಕೇಂದ್ರ, ರಾಜ್ಯ, ಬ್ಯಾಂಕಿಂಗ್ ವಲಯಗಳಲ್ಲಿ ಸೇರಲು ಆದ್ಯತೆಯನ್ನೂ ನೀಡಲಾಗುತ್ತದೆ. ಅಗ್ನಿಪಥ ಸಾಮರ್ಥ್ಯ ತುಂಬುವ ಕೆಲಸ ಮಾಡುತ್ತದೆ, ದುರ್ಬಲ‌ ಮಾಡಲು ತಂದಿದ್ದಲ್ಲ ಎಂದು ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ :ಪಠ್ಯದಲ್ಲಿ ಕುವೆಂಪು ಅವಮಾನ ಖಂಡಿಸಿ ಆರ್​ಎಸ್​ಎಸ್​ ಚಡ್ಡಿ ಸುಟ್ಟು ಪ್ರತಿಭಟನೆ..

Last Updated : Jun 19, 2022, 1:28 PM IST

ABOUT THE AUTHOR

...view details