ಬೆಂಗಳೂರು: ಕೊರೊನಾ ಪ್ಯಾಕೇಜ್ ಅಡಿಯಲ್ಲಿ ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ ಪರಿಹಾರದ ಮೊತ್ತ ನೀಡುವ ಯೋಜನೆಗೆ ಆನ್ಲೈನ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಮೆಕ್ಕೆಜೋಳ, ಹೂ ಬೆಳೆಗಾರರಿಗೆ ಪ್ಯಾಕೇಜ್: ಆನ್ಲೈನ್ ಮೂಲಕ ಪರಿಹಾರ ವಿತರಣೆಗೆ ಸಿಎಂ ಚಾಲನೆ - ರೈತರಿಗೆ ಘೋಷಿಸಿದ ಪ್ಯಾಕೇಜ್ಗೆ ಚಾಲನೆ
ಮೆಕ್ಕೆಜೋಳ ಮತ್ತು ಹೂವು ಬೆಳೆದ ರೈತರಿಗೆ ಪರಿಹಾರದ ಮೊತ್ತ ನೀಡುವ ಯೋಜನೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಯೋಜನೆಗೆ ಚಾಲನೆ
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್, ತೋಟಗಾರಿಕಾ ಸಚಿವ ನಾರಾಯಣ ಗೌಡ ಸಮ್ಮುಖದಲ್ಲಿ ಯೋಜನೆ ಆರಂಭಿಸಲಾಯಿತು.
ಮೆಕ್ಕೆಜೋಳ ಬೆಳೆದ ರೈತರಿಗೆ ₹ 500 ಕೋಟಿ ಪ್ಯಾಕೇಜ್ ಹಾಗು ಹೂವು ಬೆಳೆದ ಬೆಳೆಗಾರರಿಗೆ ₹ 166 ಕೋಟಿ ಪ್ಯಾಕೇಜ್ ಅನ್ನು ಘೋಷಿಸಲಾಗಿದ್ದು ಇಂದಿನಿಂದ ರೈತರ ಖಾತೆಗಳಿಗೆ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗುತ್ತದೆ.