ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಮತ್ತೊಮ್ಮೆ ಇಳಿಕೆಯತ್ತ ಕೊರೊನಾ: 2,576 ಜನರಿಗೆ ಸೋಂಕು ಪತ್ತೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದು, ಇಂದು 2,576 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

corona in karnataka
ಕರ್ನಾಟಕದಲ್ಲಿ ಕೊರೊನಾ

By

Published : Nov 2, 2020, 8:10 PM IST

ಬೆಂಗಳೂರು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯ ದಾರಿ ಕಂಡಿದ್ದು, ಇಂದು 2,576 ಮಂದಿಗೆ ಕೊರೊನಾ‌ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,29,640ಕ್ಕೆ ಏರಿಕೆಯಾಗಿದೆ.‌ ಸೋಂಕಿಗೆ 29 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ 11,221ಕ್ಕೆ ಏರಿಕೆ ಆಗಿದೆ. 8334 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 7,73,595 ಜನರು ಡಿಸ್ಚಾರ್ಜ್ ಆಗಿದ್ದು, ಅನ್ಯಕಾರಣಕ್ಕೆ 19 ಸೋಂಕಿತರು ಮೃತರಾಗಿದ್ದಾರೆ.‌

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಸದ್ಯ 44,805 ಇದ್ದು 931 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಕಳೆದ 7 ದಿನಗಳಿಂದ 49,461 ಮಂದಿ ಹೋಂ ಐಸೋಲೇಷನ್​ನಲ್ಲಿದ್ದು, 2,81,708 ಪ್ರಾಥಮಿಕ ಸಂಪರ್ಕಿತರು, 2,81,328 ದ್ವಿತೀಯ ಸಂಪರ್ಕಿತರಿದ್ದಾರೆ. ವಿಮಾನ ನಿಲ್ದಾಣದಲ್ಲಿ 561 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.‌

ರಾಜ್ಯದಲ್ಲಿ ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 3.28ರಷ್ಟು ಇದ್ದು, ಸೋಂಕಿನಿಂದ ಶೇಕಡಾ 1.12ರಷ್ಟು ಮಂದಿ ಮೃತಪಟ್ಟಿದ್ದಾರೆ. ಇಂದು 78,496 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದ್ದು, ಇದರಲ್ಲಿ 2,576 ಜನರಿಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

...view details