ಕರ್ನಾಟಕ

karnataka

ETV Bharat / city

ಪ್ರತಿಪಕ್ಷ ನಾಯಕ ಸ್ಥಾನದ ಭರವಸೆಯೊಂದಿಗೆ ಹಿಂತಿರುಗಿದ್ರಾ ಹೆಚ್​ಕೆಪಿ?

ಶುಕ್ರವಾರ ದೆಹಲಿಗೆ ತೆರಳಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಶನಿವಾರ ನಗರಕ್ಕೆ ವಾಪಾಸಾಗಿದ್ದು, ಪ್ರತಿಪಕ್ಷ ನಾಯಕ ಸ್ಥಾನದ ಭರವಸೆ ಪಡೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ.

competition-for-leader-of-the-opposition

By

Published : Oct 5, 2019, 8:41 PM IST

ಬೆಂಗಳೂರು:ಶುಕ್ರವಾರ ದೆಹಲಿಗೆ ತೆರಳಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಶನಿವಾರ ನಗರಕ್ಕೆ ವಾಪಾಸಾಗಿದ್ದು, ಪ್ರತಿಪಕ್ಷ ನಾಯಕ ಸ್ಥಾನದ ಭರವಸೆಯೊಂದಿಗೆ ಮರಳಿರುವ ಮಹತ್ವದ ಮಾಹಿತಿ ಇದೆ.

ಮಾಜಿ ಸಚಿವ ಎಚ್.ಕೆ.ಪಾಟೀಲ್ ನವದೆಹಲಿಗೆ ತೆರಳಿ, ರಾಜ್ಯಸಭೆ ಸದಸ್ಯ ಹಾಗೂ ಎಐಸಿಸಿ ಖಜಾಂಚಿ ಅಹ್ಮದ್ ಪಟೇಲ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬೆಳವಣಿಗೆಯ ಕುರಿತು ಮಾಹಿತಿಯನ್ನೂ ಅವರು ಒದಗಿಸಿದ್ದಾರೆ. ಜತೆಗೆ ತಮಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಆಗಬಲ್ಲ ಅನುಕೂಲಗಳು, ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಹಾಗೂ ಲಿಂಗಾಯತ ಸಮುದಾಯದ ಮತ ಸೆಳೆದುಕೊಳ್ಳಲು ಅನುಕೂಲವಾಗಲಿದೆ ಎಂಬುದಾಗಿ ಹೇಳಿ ಪಕ್ಷದ ವರಿಷ್ಠರ ಗಮನ ಸೆಳೆದಿದ್ದಾರೆ ಎಂಬ ಮಾಹಿತಿ ಇದೆ.

ಇದಕ್ಕೆ ಒಪ್ಪಿರುವ ಅಹ್ಮದ್ ಪಟೇಲ್ ನಿಮಗೇ ಪ್ರತಿಪಕ್ಷ ನಾಯಕ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರ ಜತೆ ಧನಾತ್ಮಕವಾಗಿ ಮಾತನಾಡುತ್ತೇನೆಂಬ ಭರವಸೆ‌ ನೀಡಿದ್ದಾರೆ ಎಂದು ಎಚ್.ಕೆ.ಪಾಟೀಲರ ಅಧಿಕೃತ ಮೂಲಗಳು ತಿಳಿಸಿವೆ.

ಈಗಾಗಲೇ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಪ್ರಬಲ ಆಕಾಂಕ್ಷಿಯಾಗಿ ಮುಂಚೂಣಿಯಲ್ಲಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೂಡಾ ಈ ಸ್ಥಾನಕ್ಕೆ ತೀವ್ರ ಪ್ರತಿಸ್ಫರ್ಧೆ ಒಡ್ಡಿದ್ದರು. ಆದ್ರೆ, ಡಿಕೆಶಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದು ನಂತರದ ಸ್ಥಾನದಲ್ಲಿದ್ದ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಇದ್ದಾರೆ. ಎರಡು ವಾರದಿಂದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೆಸರೂ ಇದಕ್ಕೆ ಸೇರ್ಪಡೆಯಾಗಿದೆ.

ವಿಧಾನಮಂಡಲ ಅಧಿವೇಶನ ಆರಂಭವಾಗಗಲು ಇನ್ನೂ ಐದು ದಿನ ಬಾಕಿಯಿದ್ದು, ಕಾಂಗ್ರೆಸ್ ಹೈಕಮಾಂಡ್​ನಿಂದ ಪ್ರತಿಪಕ್ಷ ನಾಯಕರ ಹೆಸರು ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಹಲವು ನಿರೀಕ್ಷೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್​ ನಿಲುವಿಗಾಗಿ ಕಾದು ಕುಳಿತಿದ್ದ ಸಂದರ್ಭದಲ್ಲಿ ಪಾಟೀಲರು ಭರವಸೆಯೊಂದಿಗೆ ಹಿಂದಿರುಗಿರುವುದು ರಾಜ್ಯ ನಾಯಕರಲ್ಲಿ ಅಚ್ಚರಿ ಮೂಡಿಸಿದೆ.

ABOUT THE AUTHOR

...view details