ಕರ್ನಾಟಕ

karnataka

By

Published : Jul 9, 2021, 6:20 PM IST

ETV Bharat / city

Cafe Coffee Day: 4 ತಿಂಗಳಿಂದ ಸಂಬಳ ನೀಡಿಲ್ಲವೆಂದು ಪ್ರತಿಭಟನೆ ಕುಳಿತ ಸಿಬ್ಬಂದಿ

ತಮಗೆ ಸಂಬಳ ನೀಡಿಲ್ಲವೆಂದು ಕೆಫೆ ಕಾಫಿ ಡೇ ಶಾಪ್‌ನಲ್ಲಿ ಕುಳಿತು 40ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆ ನಡೆಸಿದರು.

coffee shop Staff protest in benglure
ಕಾಫಿ ಡೇ ಶಾಪ್‌ ಮುಂದೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿ

ಬೆಂಗಳೂರು: ಕಳೆದ ನಾಲ್ಕು ತಿಂಗಳಿಂದ ತಮಗೆ ಸಂಬಳ ನೀಡಿಲ್ಲವೆಂದು ಆರೋಪಿಸಿ ಸುಮಾರು 40ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಸಿಬ್ಬಂದಿ ರಾಜಧಾನಿಯಲ್ಲಿ ದಿಢೀರ್​ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾಫಿ ಡೇ ಎಸೆನ್ಸಿಯಲ್ ಸಿಬ್ಬಂದಿ ಕಳೆದ ನಾಲ್ಕು ತಿಂಗಳಿಂದ ಸಂಬಳ ನೀಡಿಲ್ಲ, ಸಂಬಳ ಬೇಕು ಎಂದು ಕಾಫಿ ಡೇ ಆಫೀಸ್​ನೊಳಗೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಆಗಮಿಸಿ, ಬಿಗಿ ಭದ್ರತೆ ನೀಡಿದರು.

ಕಾಫಿ ಡೇ ಶಾಪ್‌ ಮುಂದೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿ

ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆಯ ಕಾಫಿ ಡೇ ಶಾಪ್‌ ಮುಂದೆ ಧರಣಿ ನಡೆಸುತ್ತಿದ್ದು, ಈ ವೇಳೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರನ್ನು ನೆನೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಈ ಧರಣಿಗೆ ಆಡಳಿತ ಮಂಡಳಿ ಮಾತ್ರ ಡೋಂಟ್ ಕೇರ್ ಎನ್ನುತ್ತಿದೆ.

ABOUT THE AUTHOR

...view details