ಬೆಂಗಳೂರು:ಹಿಜಬ್-ಕೇಸರಿ ಶಾಲು ವಿವಾದದ ಬಗ್ಗೆ ಹೈಕೋರ್ಟ್ ರಾಜ್ಯದಲ್ಲಿ ಯತಾಸ್ಥಿತಿ ಕಾಪಾಡುವುದಲ್ಲದೇ ಶೀಘ್ರವೇ ಶಾಲಾ-ಕಾಲೇಜು ಆರಂಭಿಸಲು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳ ಆರಂಭ ಕುರಿತು ಸಭೆ ನಡೆಸಲು ಮುಂದಾಗಿದೆ.
ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ: ಸಚಿವ ನಾಗೇಶ್
ಶಾಲಾರಂಭದ ಬಗ್ಗೆ ಸಂಜೆ 6 ಗಂಟೆಗೆ ಸಿಎಂ, ಶಿಕ್ಷಣ ಸಚಿವರು, ಶಿಕ್ಷಣಾಧಿಕಾರಿಗಳ ಸಭೆ ನಡೆಯಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದ್ದಾರೆ.
ಸಚಿವ ನಾಗೇಶ್
ರಾಜ್ಯದಲ್ಲಿ ಶಾಲೆಗಳ ಆರಂಭ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೋರ್ಟ್ ಆದೇಶವನ್ನು ಪಾಲನೆ ಮಾಡಲಾಗುವುದು. ಅಲ್ಲದೇ ಮಕ್ಕಳ ಶಿಕ್ಷಣದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಶಾಲಾರಂಭದ ಬಗ್ಗೆ ಸಿಎಂ, ಗೃಹಸಚಿವರು, ಶಿಕ್ಷಣ ಸಚಿವರು, ಶಿಕ್ಷಣಾಧಿಕಾರಿಗಳ ಸಭೆ ನಡೆಯಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ಮಾಹಿತಿ ನೀಡಿದ್ದಾರೆ.
Last Updated : Feb 10, 2022, 8:27 PM IST