ಕರ್ನಾಟಕ

karnataka

ETV Bharat / city

ಮೋದಿ ವಿಡಿಯೋ ಕಾನ್ಫ್​​ರೆನ್ಸ್​​ಗೂ ಮುನ್ನ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಪೂರ್ವಭಾವಿ ಸಭೆ - ಸಚಿವರು, ಅಧಿಕಾರಿಗಳ ಜೊತೆ ಸಿಎಂ ಪೂರ್ವಭಾವಿ ಸಭೆ

ಮೋದಿ ಅವರೊಂದಿಗೆ ವಿಡಿಯೋ ಕಾನ್ಫ್​ರೆನ್ಸ್​​ನಲ್ಲಿ ಭಾಗಿಯಾಗುವ ಮುನ್ನ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು, ಸಚಿವರು, ಅಧಿಕಾರಿಗಳೊಂದಿಗೆ ಕೊರೊನಾ ಲಾಕ್​ಡೌನ್​ ವಿಸ್ತರಣೆ ಮಾಡಬೇಕೆ, ಬೇಡವೇ ಎಂಬುದರ ಕುರಿತು ಚರ್ಚೆ ನಡೆಸಿದರು.

CM preliminary meeting with ministers and officials
ಚಿವರು, ಅಧಿಕಾರಿಗಳ ಜೊತೆ ಸಿಎಂ ಪೂರ್ವಭಾವಿ ಸಭೆ

By

Published : Apr 27, 2020, 10:38 AM IST

ಬೆಂಗಳೂರು: ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾನ್ಫ್​​ರೆನ್ಸ್​​​ಗೂ ಮುನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹಾಗು ಸಂಬಂಧಪಟ್ಟ ಇಲಾಖೆಗಳ‌ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೂರ್ವಭಾವಿ ಸಭೆ ನಡೆಸಿದರು.

ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮೋದಿ ಅವರ ಜೊತೆಗಿನ ವಿಡಿಯೋ ಕಾನ್ಫ್​ರೆನ್ಸ್​​​ನಲ್ಲಿ ಲಾಕ್​​ಡೌನ್ ಸಡಿಲಿಕೆ ಅಥವಾ ಮುಂದುವರಿಕೆ ಕುರಿತು ರಾಜ್ಯ ಯಾವ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಯಿತು.

ಕೆಲ ರಾಜ್ಯಗಳು ಲಾಕ್​​ಡೌನ್ ಮುಂದುವರೆಸುವ ಕುರಿತು ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ನಿಲುವು ಹೇಗಿರಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು. ಇದೀಗ ಪ್ರಧಾನಿ ಮೋದಿ ಆರಂಭಿಸಿರುವ ವಿಡಿಯೋ ಕಾನ್ಫ್​​ರೆನ್ಸ್​​ನಲ್ಲಿ ಬಿಎಸ್​​ವೈ ಭಾಗಿಯಾಗಿದ್ದಾರೆ.

ABOUT THE AUTHOR

...view details