ಬೆಂಗಳೂರು:ಕಳೆದ ಎರಡು ತಿಂಗಳಿನಿಂದ ಬಿಡುವಿಲ್ಲದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೌರಿ ಗಣೇಶ ಹಬ್ಬಕ್ಕೆ ಬಿಡುವು ಮಾಡಿಕೊಂಡು ಕುಟುಂಬ ಸದಸ್ಯರ ಜೊತೆಯಲ್ಲಿ ಹಬ್ಬ ಆಚರಿಸಿದ್ದಾರೆ.
ಮಕ್ಕಳು, ಮೊಮ್ಮಕ್ಕಳ ಜೊತೆ ಗೌರಿ ಗಣೇಶ ಹಬ್ಬ ಆಚರಿಸಿದ ಸಿಎಂ - CM celebrated Gauri Ganesh festival
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರಿ-ಗಣೇಶ ಹಬ್ಬಕ್ಕೆ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರ ಜೊತೆಯಲ್ಲಿ ಹಬ್ಬ ಆಚರಿಸಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ ಮಾಡಲಾಯಿತು. ನಂತರ ಹಿರಿಯ ಪುತ್ರ ವಿಜಯೇಂದ್ರ ನಿವಾಸಕ್ಕೆ ತೆರಳಿದ ಸಿಎಂ, ಗೌರಿ ಗಣೇಶ ಹಬ್ಬದಲ್ಲಿ ಭಾಗಿಯಾದರು. ಮಕ್ಕಳು, ಮೊಮ್ಮಕ್ಕಳ ಜೊತೆಗೆ ಗೌರಿ ಗಣೇಶ ಹಬ್ಬ ಆಚರಿಸಿದರು.
ಕಳೆದ ಎರಡು ತಿಂಗಳಿನಿಂದ ವಿಜಯೇಂದ್ರ, ರಾಘವೇಂದ್ರ ಹೊರತುಪಡಿಸಿ ಮಕ್ಕಳು, ಮೊಮ್ಮಕ್ಕಳನ್ನ ಭೇಟಿಯಾಗಿರಲಿಲ್ಲ. ಅಧಿಕಾರ ವಹಿಸಿಕೊಂಡ ನಂತರವೂ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸುವುದರಲ್ಲೇ ಬ್ಯುಸಿ ಇದ್ದ ಸಿಎಂ ನಂತರ ಸಂಪುಟ ವಿಸ್ತರಣೆಯ ಗದ್ದಲದಲ್ಲಿ ತಲ್ಲೀನರಾಗಿದ್ದರು. ಬಹುದಿನಗಳ ನಂತರ ಇಂದು ಮೊಮ್ಮಕ್ಕಳ ಜೊತೆಗೆ ಸಿಎಂ ಕಾಲ ಕಳೆದಿದ್ದಾರೆ.