ಬೆಂಗಳೂರು:ಇತ್ತೀಚಿಗೆ ಹಲವು ಸಂಘಟನೆಗಳು ಮತ್ತು ಸಮುದಾಯಗಳು ಮೀಸಲಾತಿಗಾಗಿ ಮತ್ತು ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಮೀಸಲಾತಿ ಬೇಡಿಕೆಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ ಟ್ವೀಟ್ - ಸಿಎಂ ಬಿಎಸ್ವೈ ಟ್ವೀಟ್
ಕೆಲವು ಸಮುದಾಯಗಳು ಸಲ್ಲಿಸಿರುವ ಮೀಸಲಾತಿ ಮನವಿಯನ್ನು ಪರಿಶೀಲನೆ ನಡೆಸಲು ಸಮಿತಿ ರಚನೆ ಮಾಡಿರುವುದಾಗಿ ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.
ಸಿಎಂ ಬಿಎಸ್ವೈ
ಸಚಿವ ಸಂಪುಟದ ತೀರ್ಮಾನದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿಎಸ್ವೈ 'ಮೀಸಲಾತಿ ಬಗ್ಗೆ ಇರುವ ವಿವಿಧ ಬೇಡಿಕೆಗಳನ್ನು ಸಂವಿಧಾನಾತ್ಮಕವಾಗಿ ಹಾಗು ಕಾನೂನಾತ್ಮಕ ಚೌಕಟ್ಟಿನಲ್ಲಿ ಪರೀಶೀಲಿಸಲು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಸುಭಾಷ್ ಅಡಿ ಅವರ ಅಧ್ಯಕ್ಷತೆಯಲ್ಲಿ, ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಬಿ.ವಿ.ವಸಂತಕುಮಾರ್ ಸದಸ್ಯರಾಗಿರುವ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.