ಬೆಂಗಳೂರು :ಸಿಎಂ ಯಡಿಯೂರಪ್ಪ ದೆಹಲಿಗೆ ಹಠಾತ್ ಭೇಟಿ ನೀಡಿರೋದು ಸಚಿವರನ್ನು ಆತಂಕಕ್ಕೆ ದೂಡಿದೆ. ನಾಯಕತ್ವ ಬದಲಾವಣೆಯ ಕೂಗು ಮತ್ತೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಸಚಿವರಲ್ಲಿ ಗೊಂದಲ ಉಂಟಾಗಿದೆ. ಸಿಎಂ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿದ್ದು, ಏನಾಗುತ್ತದೆ ಎಂದು ತುದಿಗಾಲಲ್ಲಿ ಕುಳಿತಿದ್ದಾರೆ.
ದೆಹಲಿಗೆ ಹಾರಿದ ಸಿಎಂ.. ಕಮಲಪಾಳಯದಲ್ಲಿ ಮತ್ತೆ ಗರಿಗೆದರಿದ ನಾಯಕತ್ವ ಬದಲಾವಣೆ ಚರ್ಚೆ.. - ಪ್ರಧಾನಿ ನರೇಂದ್ರ ಮೋದಿ
ಒಂದು ಕಡೆಯಲ್ಲಿ ಸಿಎಂ ದೆಹಲಿಗೆ ತೆರಳಿದರೆ ಇತ್ತ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಚುರುಕು ಪಡೆದುಕೊಳ್ಳುತ್ತಿವೆ. ವಿಧಾನಸೌಧದಲ್ಲಿ ಸಚಿವ ಆರ್. ಅಶೋಕ್ ಕಚೇರಿಯಲ್ಲಿ ಮಹತ್ವದ ಮಾತುಕತೆ ನಡೆದಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ್ ರಹಸ್ಯ ಮಾತುಕತೆ ನಡೆಸಿದ್ದಾರೆ..
ಮುಖ್ಯಮಂತ್ರಿ ದೆಹಲಿ ಭೇಟಿ ಮಾಡುವ ಬಗ್ಗೆ ಬಹುತೇಕ ಸಚಿವರಲ್ಲಿ ಯಾವುದೇ ಮಾಹಿತಿ ಇಲ್ಲ. ಸಿಎಂ ತಮ್ಮ ಪುತ್ರ ವಿಜಯೇಂದ್ರ ಜೊತೆಗೂಡಿ ದೆಹಲಿಗೆ ತೆರಳಿದ್ದಾರೆ. ಯಾವುದೇ ಸಚಿವರು ಸಿಎಂಗೆ ಸಾಥ್ ನೀಡದೇ ಇರುವುದೇ ಸಚಿವರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೆಲ ಸಚಿವರುಗಳೇ ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ. ಸಿಎಂ-ಪಿಎಂ ಭೇಟಿ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಒಂದು ಕಡೆಯಲ್ಲಿ ಸಿಎಂ ದೆಹಲಿಗೆ ತೆರಳಿದರೆ ಇತ್ತ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಚುರುಕು ಪಡೆದುಕೊಳ್ಳುತ್ತಿವೆ. ವಿಧಾನಸೌಧದಲ್ಲಿ ಸಚಿವ ಆರ್. ಅಶೋಕ್ ಕಚೇರಿಯಲ್ಲಿ ಮಹತ್ವದ ಮಾತುಕತೆ ನಡೆದಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಅರವಿಂದ ಬೆಲ್ಲದ್ ರಹಸ್ಯ ಮಾತುಕತೆ ನಡೆಸಿದ್ದಾರೆ.