ಕರ್ನಾಟಕ

karnataka

ETV Bharat / city

ಸಂಪುಟ ವಿಸ್ತರಣೆ: ವರಿಷ್ಠರು ತಿಳಿಸಿದ ತಕ್ಷಣ ದೆಹಲಿಗೆ ಹೋಗುವೆ- ಸಿಎಂ ಬೊಮ್ಮಾಯಿ

ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರು ತಿಳಿಸಿದ ಕೂಡಲೇ ನಾನು ದೆಹಲಿಗೆ ಹೋಗುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

cm-bommai-says-ready-to-go-to-delhi-as-soon-as-they-informed-from-delhi
ಸಂಪುಟ ವಿಸ್ತರಣೆ ಸಂಬಂಧ ದಿಲ್ಲಿಯಿಂದ ತಿಳಿಸಿದ ತಕ್ಷಣ ದಿಲ್ಲಿಗೆ ಹೋಗಲು ರೆಡಿ: ಸಿಎಂ ಬೊಮ್ಮಾಯಿ

By

Published : May 5, 2022, 12:06 PM IST

ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರು ತಿಳಿಸಿದ ತಕ್ಷಣ ದೆಹಲಿಗೆ ಹೋಗುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧಲ್ಲಿ ದಿ.ಕೆ.ಸಿ.ರೆಡ್ಡಿಯವರ 120ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಪ್ರತಿಮೆಯ ಮುಂದಿನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ಅವರು, ಸಚಿವ ಸಂಪುಟ ವಿಚಾರದ ಬಗ್ಗೆ ಕೆಲವೊಂದನ್ನು ನೀವೇ ಸೃಷ್ಟಿಸುತ್ತೀರಿ. ಮತ್ತೆ ನೀವೇ ಸ್ಪಷ್ಟನೆ ಕೇಳುತ್ತೀರಿ. ನಾನು ಎಲ್ಲೂ ಈ ಬಗ್ಗೆ ಹೇಳಿಲ್ಲ. ಇದೆಲ್ಲ ನಿಮ್ಮ ಕಟ್ಟುಕಥೆಗಳಷ್ಟೇ. ನಾನು ಹೇಳಿದ್ದನ್ನು ನೀವು ಅಧಿಕೃತ ಎಂದು ತೆಗೆದುಕೊಳ್ಳಬೇಕು. ಅರುಣ್ ಸಿಂಗ್ ದೆಹಲಿಗೆ ಹೋಗಿ ಎಲ್ಲರ ಬಳಿಯೂ ಚರ್ಚಿಸಿದ ಬಳಿಕ ತಿಳಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.


ಪ್ರತಿಮೆ ಸ್ಥಾಪನೆಗೆ ಕಾರ್ಯಾದೇಶ: ಈ ಸಂದರ್ಭದಲ್ಲಿ ಮಾಜಿ ಸಿಎಂ ದಿ.ಕೆ‌.ಸಿ.ರೆಡ್ಡಿಯವರ ಕಂಚಿನ ಪುತ್ಥಳಿ ನಿರ್ಮಿಸಲು ಕಾರ್ಯಾದೇಶವನ್ನು ಹೊರಡಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು. ವಿಧಾನಸೌಧದಲ್ಲಿ ಫೈಬರ್ ಪ್ರತಿಮೆಯನ್ನು ಕಂಚಿನ ಪ್ರತಿಮೆಯಾಗಿ ಬದಲಾಯಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ಬಗ್ಗೆ ಕಾರ್ಯಾದೇಶ ಆಗಬೇಕು. ಇವತ್ತೇ ಕಾರ್ಯಾದೇಶ ನೀಡುವುದಾಗಿ ಹೇಳಿದರು.

ಇದನ್ನೂ ಓದಿ:ಮೈಸೂರು ವಿವಿಯ ಪ್ರಾಧ್ಯಾಪಕ ಪ್ರೊ.ಹೆಚ್‌.ನಾಗರಾಜು ಅಮಾನತು

ABOUT THE AUTHOR

...view details