ಕರ್ನಾಟಕ

karnataka

ETV Bharat / city

ಸೋತರು ನಿಮ್ಮ ನಾಯಕರಿಗೆ ದೊಡ್ಡ ಸಲಾಂ ಹೊಡೆಯುತ್ತೀರಾ : ಕಾಂಗ್ರೆಸ್‌ಗೆ ಸಿಎಂ ಟಾಂಗ್ - U T Khadar

ನಿಮ್ಮಿಂದ ನಾವು ಪಾಠ ಕಲಿಯಬೇಕಾ? ಎಂದು ಟಾಂಗ್ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಖಾದರ್, ಸೋತರೆ ಮತ್ತೆ ಗೆದ್ದು ಬರುತ್ತೇವೆ. ಸಲಾಂ ಹೊಡೆಯುವುದು ನಮ್ಮ ಸಂಸ್ಕೃತಿ ಎಂದು ಹೇಳಿದ್ದಾರೆ. ಈ ವೇಳೆ ಕೈ ಶಾಸಕ ರಂಗನಾಥ್, ಅದಕ್ಕೆ ಗೆದ್ದರೂ ಹಿಂದೆ ಕೂರಿಸಿದ್ದೀರಲ್ವಾ, ಅದಕ್ಕೆ ಏನು ಅಂತೀರಾ ಎಂದು ಮಾಜಿ ಸಿಎಂ ಬಿಎಸ್‌ವೈ ಹೆಸರು ಉಲ್ಲೇಖಿಸದೇ ವ್ಯಂಗ್ಯವಾಡಿದರು..

cm-basavaraj-bommai-tong-to-congress-leader
ಸೋತರು ನಿಮ್ಮ ನಾಯಕರಿಗೆ ದೊಡ್ಡ ಸಲಾಂ ಹೊಡೆಯುತ್ತೀರಾ: ಕಾಂಗ್ರೆಸ್ ಗೆ ಸಿಎಂ ಟಾಂಗ್

By

Published : Mar 16, 2022, 7:11 PM IST

ಬೆಂಗಳೂರು : ಸೋತವರ ಬಳಿ ಹೋಗಿ ಹೋಗಿ ಕೈ ಮುಗಿದುಕೊಂಡು ನಿಲ್ಲುತ್ತೀರಾ, ಸೋತರೂ ನಿಮ್ಮ ನಾಯಕರಿಗೆ ದೊಡ್ಡ ಸಲಾಂ ಹೊಡೆಯುತ್ತೀರಾ ಎಂದು ಸಿಎಂ ಬೊಮ್ಮಾಯಿ ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ಭಯದಿಂದ ಸರ್ಕಾರವನ್ನು ನಡೆಸುತ್ತೀರಾ ಎಂದು ಯು ಟಿ ಖಾದರ್ ವ್ಯಂಗ್ಯವಾಡಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಮಗೆ ಯಾರ ಭಯವೂ ಇಲ್ಲ. ನಿಮಗೆ ಭಯವಿದೆ, ಆ ಭಯ ನಿಮ್ಮ ಪಾರ್ಟಿಯಲ್ಲಿದೆ. ನೀವು ಸೋತ ನಾಯಕರ ಮುಂದೆ ಸಲಾಂ ಹೊಡೆಯುತ್ತೀರಾ. ನಿಮ್ಮದು ಎಂತಹ ಧೈರ್ಯ.

ನಿಮ್ಮಿಂದ ನಾವು ಪಾಠ ಕಲಿಯಬೇಕಾ? ಎಂದು ಟಾಂಗ್ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಖಾದರ್, ಸೋತರೆ ಮತ್ತೆ ಗೆದ್ದು ಬರುತ್ತೇವೆ. ಸಲಾಂ ಹೊಡೆಯುವುದು ನಮ್ಮ ಸಂಸ್ಕೃತಿ ಎಂದು ಹೇಳಿದ್ದಾರೆ. ಈ ವೇಳೆ ಕೈ ಶಾಸಕ ರಂಗನಾಥ್, ಅದಕ್ಕೆ ಗೆದ್ದರೂ ಹಿಂದೆ ಕೂರಿಸಿದ್ದೀರಲ್ವಾ, ಅದಕ್ಕೆ ಏನು ಅಂತೀರಾ ಎಂದು ಮಾಜಿ ಸಿಎಂ ಬಿಎಸ್‌ವೈ ಹೆಸರು ಉಲ್ಲೇಖಿಸದೇ ವ್ಯಂಗ್ಯವಾಡಿದರು.

ಈ ವೇಳೆ ಮಾತನಾಡಿದ ಶಾಸಕ ಕೃಷ್ಣಬೈರೇಗೌಡ, 2015ರಿಂದ ಕೇಂದ್ರ ಸರ್ಕಾರದ ಬಜೆಟ್ ಗಾತ್ರದ ಶೇ.1.47ರಷ್ಟು ಹಣ ರಾಜ್ಯಕ್ಕೆ ಬರ್ತಿತ್ತು. ಈ ಬಾರಿಯ ಕೇಂದ್ರದ ಬಜೆಟ್ ಗಾತ್ರದ ಮೇಲೆ 1.47 ಅಂದರೆ ಸರಿ ಸುಮಾರು 53 ಸಾವಿರ ಕೋಟಿ ರೂ. ಬರಬೇಕು. ಆದರೆ, ಕೇವಲ 27 ಸಾವಿರ ಕೋಟಿ ರೂ. ಮಾತ್ರ ನಮ್ಮ ರಾಜ್ಯಕ್ಕೆ ಬರುತ್ತಿದೆ ಅಂತಾರೆ.

ಅರ್ಧದಷ್ಟು ನಮ್ಮ ಪಾಲಿನ ಹಣ, ಕೇಂದ್ರದಿಂದ ನಮಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಬೈರೇಗೌಡ ಹೇಳಿಕೆಗೆ ಆಕ್ಷೇಪಿಸಿದ ಬಸವರಾಜ್ ಬೊಮ್ಮಾಯಿ, ಕೇಂದ್ರದ ಬಜೆಟ್ ಗಾತ್ರದ ಮೇಲೆ ಲೆಕ್ಕ ಹಾಕಲು ಬರುವುದಿಲ್ಲ. ಅವರು ದೊಡ್ಡ ಪ್ರಮಾಣದಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಅದೆಲ್ಲ ಲೆಕ್ಕ ಹಾಕಲು ಬರುತ್ತಾ?. ಸದನದ ದಾರಿ ತಪ್ಪಿಸ್ತಿದ್ದೀರಾ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಓದಿ :ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಾಜಿ ರಕ್ಷಣಾ ಕಾರ್ಯದರ್ಶಿ, ಸಿಎಜಿ ವಿರುದ್ಧ ಸಿಬಿಐ ಚಾರ್ಜ್​​​ಶೀಟ್​

ABOUT THE AUTHOR

...view details