ಕರ್ನಾಟಕ

karnataka

ETV Bharat / city

ಡ್ರ್ಯಾಗ್‌ ರೇಸ್‌/ ವ್ಹೀಲಿಂಗ್ ಮಾಡಿದ್ರೆ ಜೈಲು ಫಿಕ್ಸ್: ನಗರ ಪೊಲೀಸ್ ಆಯುಕ್ತರ ಎಚ್ಚರಿಕೆ

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಡ್ರ್ಯಾಗ್ ರೈಡ್/ ವ್ಹೀಲಿಂಗ್ ಮಾಡಿದ್ರೆ ಜೈಲು ಶಿಕ್ಷೆ ನಿಶ್ಚಿತ ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

kamal pant
ಕಮಲ್ ಪಂತ್

By

Published : Oct 29, 2020, 1:29 PM IST

ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಸದ್ಯ ಪುಂಡ ಯುವಕರು ಖಾಲಿ ರಸ್ತೆಗಳಲ್ಲಿ ವ್ಹೀಲಿಂಗ್, ಜಾಲಿ ರೈಡ್ ಮಾಡುತ್ತಿದ್ದು ಪ್ರಾಣಕ್ಕೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಪೊಲೀಸ್ ಆಯುಕ್ತ ಕಮಲ್ ಪಂತ್​​​ ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ.

ದ್ವಿಚಕ್ರ ವಾಹನಗಳಲ್ಲಿ ಡ್ರ್ಯಾಗ್ ರೇಸ್/ ವ್ಹೀಲಿಂಗ್ ನಂತಹ ಅಪಾಯಕಾರಿ ಸ್ಟಂಟ್ ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಸಿಆರ್​​ಪಿಸಿ ಕಾಯ್ದೆಯಡಿ ಅಧಿಕ ಮೊತ್ತದ ದಂಡದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಎಷ್ಟೇ ಪ್ರಭಾವಿಗಲಾಗಿದ್ದರೂ ಮೋಜು, ಮಸ್ತಿಗಾಗಿ ವ್ಹೀಲಿಂಗ್​​​ ಮಾಡಿದರೆ ಅಂತವರ ವಿರುದ್ಧ ಸಿಆರ್​ಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಹಾಗೆಯೇ ವ್ಹೀಲಿಂಗ್​​​​​​​ ಮಾಡಲು ಸೈಲೆನ್ಸರ್ ಮಾರ್ಪಾಡು ಮಾಡುವ ಗ್ಯಾರೇಜ್ ಮಾಲೀಕರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಎಂದು ನಗರ ಪೊಲೀಸರಿಗೆ ಕಮಲ್ ಪಂತ್​ ಸೂಚನೆ ನೀಡಿದ್ದಾರೆ.

ABOUT THE AUTHOR

...view details