ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಹೈರಾಣಗಿದ್ದು, ಸಂಚಾರ ದಟ್ಟಣೆ ಸುಧಾರಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ. ಹಾಗು ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಂಚಾರ ಸಮಸ್ಯೆ ತಡೆಗೆ 2500 ಟ್ರಾಫಿಕ್ ವಾರ್ಡನ್ಗಳ ನೇಮಕಕ್ಕೆ ಮುಂದಾದ ಭಾಸ್ಕರ್ ರಾವ್ - ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ
ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಹೈರಾಣಗಿದ್ದು, ಸಂಚಾರ ದಟ್ಟಣೆ ಸುಧಾರಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ.ಈ ಕುರಿತಾಗಿ ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಾವು ವಿಭಿನ್ನವಾಗಿ ಕೆಲಸ ಮಾಡಲು ಯೋಚಿಸಿದ್ದೇವೆ. ಸಂಚಾರ ದಟ್ಟನೆಯನ್ನ ಸುಧಾರಿಸಲು ನಾವು ಮುಂದಾಗಬೇಕು. ಸದ್ಯ ಟ್ರಾಫಿಕ್ ವಾರ್ಡನ್ ಸಂಖ್ಯೆ 390ಇದೆ. ಅದನ್ನ 2,500ಕ್ಕೆ ಏರಿಕೆ ಮಾಡಲಾಗಿದೆ. ಸಾರ್ವಜನಿಕರು ಸ್ವಂಯಂ ಪ್ರೇರಿತವಾಗಿ ಟ್ರಾಫಿಕ್ ವಾರ್ಡನ್ಗಳಾಗಿ ಸೇರಬೇಕೆಂದು ಸಿಲಿಕಾನ್ ಸಿಟಿ ಜನತೆಗೆ ಮನವಿ ಮಾಡಿದ್ದಾರೆ.
ಇನ್ನು ಈ ಕುರಿತಂತೆ ಮಾಧ್ಯಮದ ಜೊತೆ ಮಾತಾನಾಡಿದ ನಗರ ಆಯುಕ್ತ, ಸಿಲಿಕಾನ್ ಸಿಟಿಯಲ್ಲಿ 80 ಲಕ್ಷದ ಮೇಲೆ ವಾಹನಗಳು ಇದೆ. ಇದರಿಂದ ಸಂಚಾರ ದಟ್ಟಣೆಗಳು ಜಾಸ್ತಿಯಾಗ್ತಿದೆ. ಹೀಗಾಗಿ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು. ಟ್ರಾಫಿಕ್ ವಾರ್ಡನ್ ಅನ್ನೋ ಹಳೇ ಯೋಜನೆಯನ್ನು ಮತ್ತೆ ಆ್ಯಕ್ಟಿವ್ ಮಾಡಬೇಕು. ಹೀಗಾಗಿ ಸಾರ್ವಜನಿಕರು ಕೈ ಜೋಡಿಸಿ ಎಂದು ಮನವಿ ಮಾಡಿದ್ರು.