ಕರ್ನಾಟಕ

karnataka

ETV Bharat / city

ಜಾಮೀನು ಅರ್ಜಿ ವಜಾ.. 'ಮಾದಕ' ನಟಿಮಣಿಯರಿಗೆ ಜೈಲು ವಾಸ ಮುಂದುವರಿಕೆ - ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಜಾ

ಡ್ರಗ್ಸ್​ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿದ್ದು, ನಟಿ ಮಣಿಯರ ಜೈಲು ವಾಸ ಮುಂದುವರೆದಿದೆ.

city-court-dismisses-ragini-sanjana-bail-application
ಸಂಜನಾ ಗಲ್ರಾನಿ ರಾಗಿಣಿ ದ್ವಿವೇದಿ

By

Published : Sep 28, 2020, 4:50 PM IST

ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ಸ್​ ನಂಟು ಪ್ರಕರಣ ಆರೋಪದಡಿ ಜೈಲು ಸೇರಿರುವ ನಟಿಮಣಿಯರ ಜಾಮೀನು ಅರ್ಜಿ ವಜಾ ಆಗಿದೆ. ನಟಿಯರಾದ ರಾಗಿಣಿ ಮತ್ತು ಸಂಜಾನಾಗೆ ಜೈಲೇ ಗತಿಯಾಗಿದೆ.

ಜಾಮೀನು ಕೋರಿ ನಟಿಯರಾದ ಸಂಜನಾ, ರಾಗಿಣಿ ದ್ವಿವೇದಿ ಹಾಗೂ ಆಪ್ತರು ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ಎನ್.ಡಿ.ಪಿ.ಎಸ್ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಕಳೆದ ವಾರ ವಾದ-ಪ್ರತಿವಾದ ಅಂತ್ಯವಾದ ಕಾರಣ ಇಂದಿಗೆ ನ್ಯಾಯಾಲಯ ಆದೇಶವನ್ನ ಕಾಯ್ದಿರಿಸಿತ್ತು. ಹೀಗಾಗಿ ನ್ಯಾಯಾಲಯ ಇದು ಗಂಭೀರ ಪ್ರಕರಣ, ಹಾಗೆಯೇ ಪ್ರಕರಣದಲ್ಲಿ ಇ.ಡಿ. ಪ್ರವೇಶಿಸಿದ ಕಾರಣ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ.

ನ್ಯಾಯಾಲಯವು ಸಿಸಿಬಿ ಪೊಲೀಸರು ಸಲ್ಲಿಸಿರುವ ಆಕ್ಷೇಪಣೆ ಹಾಗೂ ಮುಚ್ಚಿದ ಲಕೋಟೆಯಲ್ಲಿ ನೀಡಿರುವ ಕೆಲ‌ ಮಾಹಿತಿಗಳನ್ನ ಗಂಭೀರವಾಗಿ ಪರಿಗಣಿಸಿದೆ. ನಟಿಮಣಿಯರು ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಸುಮಾರು 20 ವರ್ಷ ಶಿಕ್ಷೆ ವಿಧಿಸಬಹುದು ಹಾಗೆಯೇ ಇಬ್ಬರು ಮೊಬೈಲ್ ಪಾಸ್ ವರ್ಡನ್ನ ಬಹಿರಂಗಪಡಿಸಿಲ್ಲ. ಒಂದು ವೇಳೆ ಜಾಮೀನು ನೀಡಿದರೆ ತನಿಖೆಗೆ ತೊಡಕಾಗುತ್ತದೆ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಹೀಗಾಗಿ ಇಂದು ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಇದರ ಜೊತೆಗೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಿದ್ದು ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಟ್ಟ ಹಿನ್ನೆಲೆ, ನ್ಯಾಯಾಲಯ ಅಕ್ಟೋಬರ್ 1ಕ್ಕೆ ಆತನ ಅರ್ಜಿ ಮುಂದೂಡಿದೆ. ಇದರ ಜೊತೆಗೆ ರವಿಶಂಕರ್, ಪ್ರಶಾಂತ್ ರಾಂಕಾ, ವೈಭವ್ ಜೈನ್, ಪ್ರತೀಕ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಾಕಾಶ ನೀಡಿ ಸೆ.30ಕ್ಕೆ ಮುಂದೂಡಿಕೆ ಮಾಡಿದೆ.

ಹಾಗೆಯೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಎ1ಆರೋಪಿ ಶಿವಪ್ರಕಾಶ್ ಚಿಪ್ಪಿ, ಎ12 ನೀರಿಕ್ಷಾಣಾ ಜಾಮೀನು ಸಲ್ಲಿಸಿರುವ ಅರ್ಜಿ ತಿರಸ್ಕೃತವಾಗಿದೆ. ಸದ್ಯ ಇವರ ಬಂಧನಕ್ಕೆ ಸಿಸಿಬಿ ಪೊಲೀಸರು ತಲಾಷ್ ಮುಂದುವರೆಸಿದ್ದಾರೆ‌. ಮತ್ತೊಂದೆಡೆ ಸಂಜನಾ ಆಪ್ತ ರಾಹುಲ್ ತೋನ್ಸೆ ಜಾಮೀನು ಅರ್ಜಿ ಕೂಡಾ ವಜಾ ಆಗಿದೆ‌.

ABOUT THE AUTHOR

...view details