ಬೆಂಗಳೂರು :ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲದ ಘಾಟು ಜೋರಾಗಿದೆ. ಸಿಸಿಬಿ ಅಧಿಕಾರಿಗಳು ಇಂದು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯನ್ನು ಬಂಧಿಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಸಂಜನಾ ಗುಲ್ರಾನಿಗೂ ಕಂಟಕ ಸುತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ರಾಗಿಣಿ ಬಳಿಕ ನಟಿ ಸಂಜನಾ ಮನೆಗೆ ಬಂದ ಸಿಸಿಬಿ ಅಧಿಕಾರಿಗಳು!! - Actress Ragini dwivedhi
ಸಂಜನಾ ಮನೆಯ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ಸಿಸಿಬಿ ಅಧಿಕಾರಿಗಳು ನಟಿಯ ಮನೆಯ ಫೋಟೋವನ್ನು ತೆಗೆದುಕೊಂಡು ಹಿಂದಿರುಗಿದ್ದಾರೆ ಎನ್ನಲಾಗಿದೆ..
ನಟಿ ಸಂಜನಾ
ಸಂಜನಾ ರಾಕಿ ಬ್ರದರ್ ಆಗಿರುವ ರಾಹುಲ್ ಬಂಧನದ ಹಿನ್ನೆಲೆ ಸಂಜೆ ಸಿಸಿಬಿ ಅಧಿಕಾರಿಗಳು ಇಂದಿರಾನಗರದ 100 ಫೀಟ್ ರಸ್ತೆಯಲ್ಲಿನ ಸಂಜನಾ ಮನೆಗೆ ಭೇಟಿ ನೀಡಿದ್ದಾರೆ. ಜತೆಗೆ ರಾಹುಲ್ನನ್ನೂ ಸಹ ಕರೆದುಕೊಂಡು ಬಂದು, ಸಂಜನಾ ಮನೆಯಲ್ಲಿನ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ಸಿಸಿಬಿ ಅಧಿಕಾರಿಗಳು ನಟಿಯ ಮನೆಯ ಫೋಟೋವನ್ನು ತೆಗೆದುಕೊಂಡು ಹಿಂದಿರುಗಿದ್ದಾರೆ ಎನ್ನಲಾಗಿದೆ.
Last Updated : Sep 4, 2020, 7:21 PM IST