ಬೆಂಗಳೂರು: ರಾಜರಾಜೇಶ್ವರಿ ನಗರದ ಚಾಮುಂಡೇಶ್ವರಿ ಅಸೋಸಿಯೇಷನ್ ಕ್ಲಬ್ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಜೂಜಾಡುತ್ತಿದ್ದ 20 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಕ್ಲಬ್ ಮೇಲೆ ಸಿಸಿಬಿ ದಾಳಿ... ಜೂಜಾಡುತ್ತಿದ್ದ 20ಜನ ಆರೋಪಿಗಳ ಬಂಧನ - ಸಿಸಿಬಿ ಪೊಲೀಸರು
ಕ್ಲಬ್ನಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಸಿಸಿಬಿ ದಾಳಿ. 20 ಜನ ಆರೋಪಿಗಳು ಕಂಬಿ ಹಿಂದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಘಟನೆ.
ರಾಜೇಶ್ವರಿನಗರ ಪೊಲೀಸ್ ಠಾಣೆಯ ಸರಹದ್ದಿನ ರಾಜರಾಜೇಶ್ವರಿನಗರ ಕ್ಲಬ್ನಲ್ಲಿ ಕೆಲ ಆಸಾಮಿಗಳು ಹಣವನ್ನು ಪಣವಾಗಿಕಟ್ಟಿಕೊಂಡು ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿ 20 ಜನರನ್ನು ಬಂಧಿಸಿದ್ದಾರೆ.
ಸಂತೋಷ, ಚಿಕ್ಕವರದೇಗೌಡ, ಸತೀಶ್, ಅರುಣ್ಕುಮಾರ್, ರಾಜು, ವಾಸುದೇವ, ಕುಮಾರ್, ಭೀಮೇಗೌಡ, ಸಂಪತ್, ನಾಗರಾಜ್, ಸುಬ್ರಹ್ಮಣ್ಯ, ರೇಣುಕಪ್ಪ, ರಮಾನಂದ, ಗುರು, ಗಿರೀಶ್, ಮಂಜುನಾಥ್, ಸುನೀಲ್, ಮಂಜು, ಸತಿಶ್, ಶಿವಲಿಂಗ ಬಂಧಿತ ಆರೋಪಿಗಳು. ಬಂಧಿತರಿಂದ ನಗದು ಮತ್ತು ಇಸ್ಪೀಟ್ ವಶಪಡಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.