ಕರ್ನಾಟಕ

karnataka

ETV Bharat / city

ಉಪಸಮರಕ್ಕೆ ಕೋವಿಡ್ ಹೊರೆ.. ಮೂರು ಕ್ಷೇತ್ರಗಳ ಮತದಾನಕ್ಕೆ ₹14 ಕೋಟಿಯಷ್ಟು ವೆಚ್ಚ.. - ಕರ್ನಾಟಕ ಉಪಚುನಾವಣೆ 20211

ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸರಾಸರಿ 2 ಕೋಟಿ ರೂ. ವೆಚ್ಚ ತಗುಲಲಿದೆ. ಈ ಬಾರಿ ನಡೆಯುವ ಎರಡು ವಿಧಾನಸಭಾ ಉಪಚುನಾವಣಾ ವೆಚ್ಚ ತಲಾ ಎರಡು ಕೋಟಿ ರೂ. ಆಗುವ ಸಾಧ್ಯತೆ ಇದೆ.‌ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಸಮರದ ಖರ್ಚು ಸುಮಾರು 10 ಕೋಟಿ ರೂ. ಆಗಲಿದೆ. ಇದರ ಜೊತೆಗೆ ಕೋವಿಡ್ ಮುಂಜಾಗ್ರತಾ ಕ್ರಮಕ್ಕಾಗಿ ಹೆಚ್ಚುವರಿ ಒಂದು ಕೋಟಿ ರೂ. ತಗುಲಲಿದೆ..

by-election-costs-will-rise-due-to-corona
ಉಪಚುನಾವಣೆ

By

Published : Apr 10, 2021, 7:27 PM IST

ಬೆಂಗಳೂರು :ಬೆಳಗಾವಿ ಲೋಕಸಭೆ ಕ್ಷೇತ್ರ ಸೇರಿ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಸಮರದ ಪ್ರಚಾರ ಕಾವೇರಿದೆ. ಕೋವಿಡ್-19 ಎರಡನೇ ಅಲೆಯ ಮಧ್ಯೆ ಈ‌ ಮೂರು ಕ್ಷೇತ್ರಗಳ ಉಪಚುನಾವಣೆ ವಾರ್ ನಡೆಯುತ್ತಿದೆ. ಆದರೆ, ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ‌ನಡೆಯಲಿರುವ ಉಪಸಮರಕ್ಕಾಗಿ ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.

ಜಿದ್ದಾಜಿದ್ದಿನಿಂದ ಕೂಡಿದ ಮೂರು ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಏಪ್ರಿಲ್ 17ರಂದು ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದೆ.

ಈ ಮೂರು ಕ್ಷೇತ್ರಗಳ ಉಪಸಮರ ಕೊರೊನಾ ಎರಡನೇ ಅಲೆಯ ಅಟ್ಟಹಾಸದ ಮಧ್ಯೆ ನಡೆಯುತ್ತಿದೆ. ಹೀಗಾಗಿ, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಅದರಂತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಈ ಬಾರಿ ಉಪಸಮರ ನಡೆಸಲಾಗುತ್ತಿದೆ.

ಮತದಾರರು ಮತ್ತು ಮತಗಟ್ಟೆ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಿ ಕೋವಿಡ್ ಮಾರ್ಗಸೂಚಿಯನ್ವಯ ಚುನಾವಣೆ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಅನುಸರಿಸಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸುತ್ತಿದೆ. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ನಡೆಯುತ್ತಿರುವ ಉಪಸಮರಕ್ಕಾಗಿ ಚುನಾವಣಾ ಆಯೋಗ ಹೆಚ್ಚುವರಿ ವೆಚ್ಚವನ್ನೂ ಭರಿಸುತ್ತಿದೆ.

ಎರಡನೇ ಅಲೆ ಮಧ್ಯೆ ಉಪಸಮರ ಇನ್ನೂ ದುಬಾರಿ :ಕೋವಿಡ್ ಎರಡನೇ ಅಲೆಯ ಅಬ್ಬರದ ಮಧ್ಯೆ ಚುನಾವಣಾ ಆಯೋಗ ಈ ಬಾರಿ ಮೂರು ಕ್ಷೇತ್ರಗಳ ಉಪ ಸಮರವನ್ನು ಕೈಗೊಳ್ಳುತ್ತಿದೆ. ಹೀಗಾಗಿ, ಈ ಉಪಸಮರದ ಖರ್ಚು ಇನ್ನಷ್ಟು ದುಬಾರಿಯಾಗಿದೆ. ಚುನಾವಣೆ ನಡೆಸಲು ಭದ್ರತೆ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಚುನಾವಣಾ ಆಯೋಗ ಕೋಟ್ಯಂತರ ರೂ. ವ್ಯಯಿಸುತ್ತದೆ.

ಆದರೆ, ಈ ಬಾರಿಯ ಉಪಸಮರದ ಕ್ಷೇತ್ರಗಳ ಉಪಚುನಾವಣೆ ಸಾಮಾನ್ಯವಾಗಿಲ್ಲ. ಎರಡನೇ ಅಲೆ ಮಧ್ಯೆ ಸುರಕ್ಷಿತವಾಗಿ ಉಪಸಮರ ನಡೆಸುವುದು ಚುನಾವಣಾ ಆಯೋಗದ ಮುಂದಿರುವ ದೊಡ್ಡ ಸವಾಲು. ಇದಕ್ಕಾಗಿಯೇ ಆಯೋಗ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ, ಸಾಮಾನ್ಯ ಚುನಾವಣಾ ಖರ್ಚಿನ ಜೊತೆಗೆ ಸುಮಾರು 30-40% ಹೆಚ್ಚುವರಿ ಖರ್ಚು ತಗುಲಲಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸರಾಸರಿ 2 ಕೋಟಿ ರೂ. ವೆಚ್ಚ ತಗುಲಲಿದೆ. ಈ ಬಾರಿ ನಡೆಯುವ ಎರಡು ವಿಧಾನಸಭಾ ಉಪಚುನಾವಣಾ ವೆಚ್ಚ ತಲಾ ಎರಡು ಕೋಟಿ ರೂ. ಆಗುವ ಸಾಧ್ಯತೆ ಇದೆ.‌ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಸಮರದ ಖರ್ಚು ಸುಮಾರು 10 ಕೋಟಿ ರೂ. ಆಗಲಿದೆ. ಇದರ ಜೊತೆಗೆ ಕೋವಿಡ್ ಮುಂಜಾಗ್ರತಾ ಕ್ರಮಕ್ಕಾಗಿ ಹೆಚ್ಚುವರಿ ಒಂದು ಕೋಟಿ ರೂ. ತಗುಲಲಿದೆ.

ಅಂದರೆ ಹೆಚ್ಚುವರಿ 30-40% ವೆಚ್ಚ ತಗುಲುವುದರೊಂದಿಗೆ, ಪ್ರತಿ ಕ್ಷೇತ್ರದ ಸಾಮಾನ್ಯ ಚುನಾವಣಾ ವೆಚ್ಚಕ್ಕೆ ಸುಮಾರು ಒಂದು ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಈ ಮೂರು ಕ್ಷೇತ್ರಗಳ ಉಪಸಮರಕ್ಕಾಗಿ ಸುಮಾರು 16-20 ಕೋಟಿ ರೂ. ಚುನಾವಣಾ ವೆಚ್ಚ ತಗುಲುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಸುರಕ್ಷತಾ ಕ್ರಮಗಳೇನು? :ಪ್ರತಿ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್​ಗಳು, ಸ್ಯಾನಿಟೈಸರ್ ಹಾಗೂ ಪ್ರತಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನೂ ಸ್ಯಾನಿಟೈಸ್ ಮಾಡಲಾಗುವುದು.

ಈ ಬಾರಿ ಗಾಳಿ ಬೆಳಕು ಇರುವ ಹಿರಿದಾದ ಮತಗಟ್ಟೆ ಕೊಠಡಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನ ಜಮಾವಣೆ ಆಗದಂತೆ ಪ್ರತಿ ಮತ ಕೇಂದ್ರಗಳಲ್ಲಿ ಮತದಾರರ ಸಂಖ್ಯೆಯನ್ನು 1,500 ರಿಂದ 1,000ಕ್ಕೆ ಕಡಿತಗೊಳಿಸಲಾಗುವುದು. ಹೀಗಾಗಿ, ಅದಕ್ಕನುಗುಣವಾಗಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.

ಕೋವಿಡ್ ಸೋಂಕಿತರಿಗೆ ಮತದಾನದ ವ್ಯವಸ್ಥೆಗೆ ವಿಶೇಷ ಸಿದ್ಧತೆ ಈ ಬಾರಿ ಮಾಡಲಾಗುವುದು. ಕೊನೆಯ ಒಂದು ಗಂಟೆಗಳ ಕಾಲ ಕೋವಿಡ್ ಸೋಂಕಿತರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತೆ. ಅದಕ್ಕಾಗಿ ಆ ಮತ ಕೇಂದ್ರದ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗುವುದು. ಹೆಚ್ಚಿನ ವಾಹನಗಳು, ಹೆಚ್ಚುವರಿ ಪಿಪಿಇ ಕಿಟ್, ಕೋವಿಡ್ ಸುರಕ್ಷಾ ಕ್ರಮಗಳಿಗಾಗಿ ವೆಚ್ಚ ತಗುಲುವುದರಿಂದ ಈ ಬಾರಿ ಉಪಸಮರದ ಚುನಾವಣಾ ವೆಚ್ಚ ಶೇ.30-40ರಷ್ಟು ಹೆಚ್ಚುವರಿಯಾಗಲಿದೆ.

ABOUT THE AUTHOR

...view details