ಬೆಂಗಳೂರು: ಇಂದು ಬೆಳಗ್ಗೆ ಮತ್ತು ಸಂಜೆ ಕ್ರಮವಾಗಿ ಜೆಪಿ ಪಾರ್ಕ್ ಹಾಗೂ ಯಶವಂತಪುರ ವಾರ್ಡ್ ನಲ್ಲಿ ನಡೆದ ಆರ್ಆರ್ ನಗರ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿದಂತಿತ್ತು.
ಉಪಕದನ: ಆರ್ ಆರ್ ನಗರದಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿ ಕಾಂಗ್ರೆಸ್ ರೋಡ್ ಶೋ
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂಬಿ ಪಾಟೀಲ್, ಕೆಜೆ ಜಾರ್ಜ್, ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಕುಸುಮಾ ಅವರಿದ್ದ ವಾಹನದಲ್ಲೂ ಸಾಮಾಜಿಕ ಅಂತರ ಕಂಡು ಬರಲಿಲ್ಲ.
ಚುನಾವಣೆ ದಿನಾಂಕ ಹತ್ತಿರವಾದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದ್ದರೂ ಈ ನಿಯಮಗಳನ್ನು ಪಕ್ಷಗಳು ಮರೆತಂತಿವೆ. ಸಂಜೆ ನೆಡೆದ ಯಶವಂತಪುರ ರೊಡ್ ಶೋ ಕಾರ್ಯಕ್ರಮ ಹಿಂಬಾಲಕರು ಮತ್ತು ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು.
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂಬಿ ಪಾಟೀಲ್, ಕೆಜೆ ಜಾರ್ಜ್, ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಕುಸುಮಾ ಅವರಿದ್ದ ವಾಹನದಲ್ಲೂ ಸಾಮಾಜಿಕ ಅಂತರ ಕಂಡು ಬರಲಿಲ್ಲ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಪಾಲಿಸದೇ ಜನ ಗುಂಪು ಗೂಡಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದು ಮಾತ್ರ ವಿಪರ್ಯಾಸವಾಗಿತ್ತು.