ಕರ್ನಾಟಕ

karnataka

ETV Bharat / city

ಮಹದಾಯಿ ಕುರಿತು ಗೋವಾ ಸಿಎಂ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ: ಬಿಎಸ್​ವೈ - BS Yediyurappa reaction about mahadayi Controversy

ಮಹದಾಯಿ ನೀರು ನಮಗೆ ಸಿಗಲೇಬೇಕು. ಈ‌ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೇಂದ್ರದ ನಾಯಕರಿಗೂ ಮಹದಾಯಿ ವಿಚಾರ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಯಡಿಯೂರಪ್ಪ
ಯಡಿಯೂರಪ್ಪ

By

Published : Jan 31, 2021, 2:53 PM IST

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲ್ಲ. ಗೋವಾ ಸಿಎಂ ಅವರ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದರು.

ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲೂ ನಮಗೆ ಅನುಕೂಲಕರವಾಗಿಯೇ ಇದೆ. ಮಹದಾಯಿ ನೀರು ನಮಗೆ ಸಿಗಲೇಬೇಕು. ಈ‌ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೇಂದ್ರದ ನಾಯಕರಿಗೂ ಮಹದಾಯಿ ವಿಚಾರ ಮನವರಿಕೆ ಮಾಡಿ ಕೊಡುತ್ತೇವೆ ಎಂದರು.

ನಾಳೆ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡ್ತೇವೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ವಿರೋಧ ಪಕ್ಷದವರಾಗಿ ಸಿದ್ದರಾಮಯ್ಯ ಅವರ ಕೆಲಸ ಮಾಡುತ್ತಾರೆ. ನಾಳೆ ಬಿಎಸಿ ಸಭೆ ಇದೆ. ನಾಳೆಯ ಸಭೆಯಲ್ಲಿ ಚರ್ಚಿಸಲಿ. ವಿಪಕ್ಷದವರು ಏನೇ ಟೀಕೆ ಟಿಪ್ಪಣಿ ಮಾಡಿದರು ನಾವು ಸ್ವಾಗತಿಸುತ್ತೇವೆ. ನಮ್ಮಿಂದ ತಪ್ಪುಗಳಾಗಿದ್ರೆ ಸರಿಪಡಿಸಿಕೊಳ್ತೇವೆ. ನಮ್ಮಿಂದ ತಪ್ಪಾಗಿಲ್ಲ ಅಂದ್ರೆ ವಿಪಕ್ಷದವ್ರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದೀರಾ ಅಂತ ಅವರಿಗೆ ತಿಳಿಸುತ್ತೇವೆ ಎಂದರು.

ABOUT THE AUTHOR

...view details