ಬೆಂಗಳೂರು:ನಗರದಲ್ಲಿ ಸಂಚಾರಿ ಪೊಲೀಸರು ನಿಯಮ ಪಾಲನೆ ಮಾಡದೆ ಇರುವ ವಾಹನ ಸವಾರರಿಗೆ ದಂಡ ಹಾಕಿ ಬುದ್ಧಿ ಕಲಿಸಲು ಮುಂದಾಗ್ತಿದ್ದಾರೆ. ಆದರೆ ದಂಡ ಹಾಕಿದರೂ ಕೂಡ ವಾಹನ ಸವಾರರು ಕ್ಯಾರೆ ಎನ್ನದೆ ದಂಡ ಪಾವತಿ ಮಾಡದೆ ಓಡಾಡ್ತಿದ್ದಾರೆ. ಸದ್ಯ ಟ್ರಾಫಿಕ್ ಇಲಾಖೆಗೆ 253 ಕೋಟಿ ರೂ. ದಂಡದ ಹಣ ಬರುವುದು ಬಾಕಿ ಉಳಿದಿದೆ.
ಕಾಂಟ್ಯಾಕ್ಟ್ಲೆಸ್ ಮೂಲಕ ದಂಡ ವಸೂಲಿ ಮಾಡುವ ಪ್ಲ್ಯಾನ್ಗೆ ಪೊಲೀಸ್ ಇಲಾಕೆ ಮುಂದಾಗಿತ್ತು. ಆದರೆ 2018ರಿಂದ ಇಲ್ಲಿಯವರೆಗೆ 253 ಕೋಟಿ ರೂ. ಬಾಕಿ ಉಳಿದಿದೆ. ಕಾಂಟ್ಯಾಕ್ಟ್ಲೆಸ್ ಅಂದ್ರೆ ಸಿಸಿಟಿವಿ, ಕ್ಯಾಮರಾ, ಪಬ್ಲಿಕ್ ಐ ಮೂಲಕ ಅಪ್ಲೋಡ್, ಫೇಸ್ಬುಕ್, ಟ್ವಿಟರ್ ಮೂಲಕ ಪರಿಶೀಲನೆ ನಡೆಸಿ ಕಾಂಟ್ಯಾಕ್ಟ್ಲೆಸ್ ಮೂಲಕ ಕೇಸ್ ಹಾಕಲಾಗ್ತಿತ್ತು.
2018ರಿಂದ ಆಗಸ್ಟ್ವರೆಗೆ 1.1 ಕೋಟಿ ಕೇಸ್ಗಳನ್ನ ಹಾಕಲಾಗಿದೆ. ಈ ಕೇಸ್ಗಳಲ್ಲಿ 294 ಕೋಟಿ ದಂಡ ಬಾಕಿ ಇತ್ತು. ಆದರೆ ಈವರೆಗೆ ಇದರ ಪೈಕಿ 41 ಕೋಟಿ ರೂ. ವಸೂಲಿಯಾಗಿದೆ. ಉಳಿದ 253 ಕೋಟಿ ಪೆಂಡಿಂಗ್ ಇದ್ದು, ಸದ್ಯ ಉಳಿದ ಹಣ ರಿಕವರಿಗಾಗಿ ಟ್ರಾಫಿಕ್ ಇಲಾಖೆ ಪ್ಲ್ಯಾನ್ ಮಾಡಿದೆ.